alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಳೆ ಈ ಯುವತಿ

miss

ಬ್ಯೂಟಿ ಕ್ವೀನ್ ಅಂದತಕ್ಷಣ ನಿಮ್ಮ ಮನಸ್ಸಿನಲ್ಲಿ ತೆಳ್ಳಗೆ ಬೆಳ್ಳಗಿರುವ ಸುರಸುಂದರಿ ಎಂಬ ಭಾವನೆ ಮೂಡುವುದು ಸಹಜ. ಯಾವುದೇ ದೈಹಿಕ ಊನವಿದ್ದವರು ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಸಾಧ್ಯತೆಗಳು ವಿರಳ. ಆದ್ರೆ ಮಲೇಶಿಯಾದಲ್ಲಿ ನಡೆದ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆ ತೀರಾ ವಿಭಿನ್ನವಾಗಿತ್ತು.

evita1-mos_062917044856

20 ವರ್ಷದ ಎವಿಟಾ ಡೆಲ್ಮುಂಡೋ ಎಂಬಾಕೆ ಮಲೇಶಿಯಾದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ಎವಿಟಾ ಸಹಜ ಸುಂದರಿ, ಆದ್ರೆ ಎಲ್ಲರಂತಿಲ್ಲ. ಆಕೆಯ ದೇಹದ ಮೇಲೆಲ್ಲ ಕಪ್ಪು ಮತ್ತು ಕಂದು ಬಣ್ಣದ ದೊಡ್ಡ ದೊಡ್ಡ ಮಚ್ಚೆಗಳಿವೆ.

evita4-mos_062917044856

ಹುಟ್ಟಿದಾಗಿನಿಂದ್ಲೂ ಈ ಮಚ್ಚೆಗಳು ಎವಿಟಾಳ ದೇಹದ ಮೇಲಿದ್ದವು. ಶಾಲೆಯಲ್ಲಿ ಸಹಪಾಠಿಗಳೆಲ್ಲ ಆಕೆಯನ್ನು ಚುಡಾಯಿಸುತ್ತಿದ್ರು. ಬರಬರುತ್ತ ಅವರಿಗೂ ಇದು ಅಭ್ಯಾವಾಗಿ ಹೋಯ್ತು. ಎವಿಟಾಗೆ ಕೂಡ ತನ್ನ ದೇಹದ ಮೇಲಿರುವ ಮಚ್ಚೆಗಳ ಬಗ್ಗೆ ಬೇಸರವಿಲ್ಲ. ಅದನ್ನವಳು ಒಪ್ಪಿಕೊಂಡಿದ್ದಾಳೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಚ್ಚೆಗಳನ್ನು ತೆಗೆದುಹಾಕುವ ಗೋಜಿಗೂ ಹೋಗಿಲ್ಲ. ಹಾಗೆಯೇ ಸೌಂದರ್ಯ ಸ್ಪರ್ಧೆಗಾಗಿ ನಡೆದ ಆಡಿಶನ್ ನಲ್ಲಿ ಪಾಲ್ಗೊಂಡಿದ್ದಾಳೆ. ಮುಂದಿನ ಸುತ್ತಿಗೆ ಆಯ್ಕೆಯಾಗುವ ವಿಶ್ವಾಸ ಕೂಡ ಅವಳಲ್ಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...