alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಣ್’ ಹೊಡೆದ ಕೇಸ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪ್ರಿಯಾ ಪ್ರಕಾಶ್ ವಾರಿಯರ್ ನಿಮಗೆ ನೆನಪಿರಬೇಕಲ್ವಾ…? ಅದೇ ಕಣ್ಸನ್ನೆಯ ಹುಡುಗಿ. ಮಲಯಾಳಂನ ಒರು ಅಡಾರ್ ಲವ್ ಸಿನಿಮಾದ ಟೀಸರ್ ಒಂದರಲ್ಲಿ ಕಣ್ ಹೊಡೆದು ಒಂದೇ ದಿನದಲ್ಲಿ ಯೂಟ್ಯೂಬ್ ಸೆನ್ಸೇಷನ್ ಆದಂತಾ ಹುಡುಗಿ.

ಪ್ರಿಯಾ ಪ್ರಕಾಶ್ ವಾರಿಯರ್ ಈಗ ಸಮಾಧಾನಪಟ್ಟುಕೊಳ್ಳುವಂತಾ ಸುದ್ದಿ ಇದೆ. ಪ್ರಿಯಾ ಕಣ್ಣು ಮಿಟುಕಿಸಿದ್ದಕ್ಕೆ ಧರ್ಮ ನಿಂದನೆಯ ಆರೋಪ ಹೊರಿಸಿ ಸುಪ್ರೀಂಕೋರ್ಟ್ನಲ್ಲಿ ಹೂಡಿದ ಪ್ರಕರಣವನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಇದರಿಂದ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

ಹೈದ್ರಾಬಾದ್ ಮೂಲದ ಮುಖೀತ್ ಖಾನ್ ಎಂಬುವವರು ಫೆಬ್ರವರಿ 14ರಂದು ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಹಾಡಿನಲ್ಲಿ ಕಣ್ಣು ಮಿಟುಕಿಸಿ ಪ್ರಿಯಾ ಇಸ್ಲಾಂನ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆ ಅಂತ ಕೇಸು ದಾಖಲಿಸಲಾಗಿತ್ತು. ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಹಾಡುವಂತ ಮಾಣಿಕ್ಯ ಮಲರಾಯ್ ಪೂವೆ ಹಾಡಿನ ಛಾಯೆ ಚಿತ್ರದಲ್ಲಿತ್ತು. ಹಾಗಾಗಿ ಪ್ರಿಯಾ ವಿರುದ್ಧ ಕೇಸು ದಾಖಲಿಸಲಾಗಿತ್ತು. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧವೂ ಕೇಸು ಹಾಕಲಾಗಿತ್ತು.

ಸೆಕ್ಷನ್ 295ಎ ಐಪಿಸಿ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಮೂರು ವರ್ಷ ಶಿಕ್ಷೆ ಅಂತ ಹೇಳಲಾಗ್ತಿತ್ತು. ಆದ್ರೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ , ಇದರಲ್ಲಿ ಸೆಕ್ಷನ್ 295ಎ ಉಲ್ಲಂಘನೆಯಾದಂತಾ ಯಾವುದೇ ಅಂಶಗಳಿಲ್ಲ. ಅನವಶ್ಯಕವಾಗಿ ಕೇಸು ದಾಖಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಬೇಡಿ ಅಂತ ದೂರುದಾರರಿಗೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣವನ್ನು ವಜಾಗೊಳಿಸಿ ಇದರಲ್ಲಿ ಚಿತ್ರತಂಡ ಅಥವಾ ಪ್ರಿಯಾ ವಾರಿಯರ್ ತಪ್ಪಿಲ್ಲ ಅಂತ ಘೋಷಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...