alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಪ್ರವೇಶದ ಬಗ್ಗೆ ದೊಡ್ಡ ಮುನ್ಸೂಚನೆ ನೀಡಿದ ಕಮಲ್

ನಟ ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗ್ಗೆ ದೊಡ್ಡ ಸೂಚನೆಯೊಂದನ್ನು ನೀಡಿದ್ದಾರೆ. ಹುಟ್ಟುಹಬ್ಬದ ದಿನ ಕಮ್ಯೂನಿಕೇಷನ್ ಸ್ಟ್ರಾಟಜಿಯೊಂದಿಗೆ ಎಲ್ಲರ ಮುಂದೆ ಬರುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ. ಯುವ ಶಕ್ತಿ ಸಂಘಟನೆಗೆ ಕಾಯ್ತಿದೆ ಎಂದು ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 7ರಂದು ಕಮಲ್ ಹಾಸನ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ವೇಳೆ ಎಲ್ಲವನ್ನೂ ಕಮಲ್ ಹಾಸನ್ ಹೇಳಲಿದ್ದಾರಂತೆ. ತಮಿಳು ಪತ್ರಿಕೆ ಆನಂದ ವಿಕಾತನ್ ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಈ ಲೇಖನಕ್ಕೆ “ಸಿದ್ಧರಾಗಿ, ನವೆಂಬರ್ 7ರಂದು ಎಲ್ಲವನ್ನೂ ಹೇಳ್ತೇನೆಂದು’’ ಶೀರ್ಷಿಕೆ ನೀಡಿದ್ದಾರೆ.

18-35 ವರ್ಷದ ಯುವಜನತೆ ಇದಕ್ಕಾಗಿ ಕಾಯ್ತಿದ್ದಾರೆ. ನನಗೆ ಇದು ಖುಷಿ ನೀಡಿದೆ. ನವೆಂಬರ್ 7ರಂದು ಎಲ್ಲ ವಿಷ್ಯದ ಬಗ್ಗೆ ಸಂಪೂರ್ಣವಾಗಿ ಹೇಳ್ತೇನೆ ಎಂದು ಕಮಲ್ ತಿಳಿಸಿದ್ದಾರೆ. ಕಮಲ್ ಹಾಸನ್ ಕಣ್ಣು ಯುವ ಜನತೆ ಮೇಲಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಶಕೆ ಶುರುಮಾಡುವ ಪ್ಲಾನ್ ನಲ್ಲಿ ಕಮಲ್ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆಯೇ ರಾಜಕೀಯ ಪ್ರವೇಶದ ಬಗ್ಗೆ ಕಮಲ್ ಮುನ್ಸೂಚನೆಗಳನ್ನು ನೀಡಿದ್ದರು. ಆದ್ರೆ ಕಮಲ್ ಯಾವ ಪಕ್ಷ ಸೇರುತ್ತಾರೆಂಬ ಗೊಂದಲ ಮನೆ ಮಾಡಿತ್ತು. ಈ ಬಗ್ಗೆ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕಮಲ್ ಸ್ಪಷ್ಟನೆ ನೀಡಿದ್ದರು. ತನ್ನದೆ ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...