alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ಎದುರು ಅಚ್ಚರಿಯ ಹೇಳಿಕೆ ನೀಡಿದ ರಜನಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸನ್ನಿಹಿತವಾಗಿದೆ. ಡಿಸೆಂಬರ್ 31 ರಂದು ರಜನಿಕಾಂತ್ ರಾಜಕೀಯ ಪ್ರವೇಶದ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಚೆನ್ನೈನಲ್ಲಿ ಇಂದಿನಿಂದ 2 ನೇ ಬಾರಿಗೆ ಅಭಿಮಾನಿಗಳೊಂದಿಗೆ ಸಂವಾದ ಆರಂಭಿಸಿರುವ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಾನು ತಮಿಳು, ತೆಲುಗು, ಕನ್ನಡ ಸೇರಿ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ರಾಜಕೀಯ ನನಗೆ ಹೊಸದೇನಲ್ಲ. 1990 ರಿಂದಲೂ ನಾನು ರಾಜಕೀಯದಲ್ಲಿದ್ದೇನೆ ಎಂದು ಹೇಳಿದ್ದಾರೆ.

ರಾಜಕೀಯದ ಕಷ್ಟಗಳು ಏನೆಂಬುದು ನನಗೆ ತಿಳಿದಿದೆ. ಯುದ್ಧಕ್ಕೆ ಇಳಿದ ಮೇಲೆ ಜಯಿಸಲೇಬೇಕು. ಜಯಗಳಿಸಲು ತೋಳ್ಬಲವಿದ್ದರೆ ಸಾಲದು, ಬುದ್ಧಿಬಲವೂ ಇರಬೇಕೆಂದು ರಜನಿಕಾಂತ್ ಹೇಳಿದ್ದಾರೆ.

ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತಾಗಿ ಹಿಂದಿನಿಂದಲೂ ಭಾರೀ ಚರ್ಚೆಗಳು ನಡೆದಿವೆ. ಕಳೆದ ಸಲ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದ ಅವರು ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಈ ಬಾರಿ ಡಿಸೆಂಬರ್ 31 ರಂದು ನಿರ್ಧಾರ ಪ್ರಕಟಿಸಿವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...