alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ರಸ್ತೆಯಲ್ಲಿ ಆಟೋ ಓಡಿಸಿದ ಹಾಲಿವುಡ್ ನಟ

ಹಾಲಿವುಡ್ ನಟ ವಿಲ್ ಸ್ಮಿತ್ ಬಾಲಿವುಡ್ ಗೆ ಎಂಟ್ರಿ ಹೊಡೆದಿರುವುದು ಗೊತ್ತೇ ಇದೆ. ಕರಣ್ ಜೋಹರ್ ಚಿತ್ರದಲ್ಲಿ ನಟಿಸುತ್ತಿರುವ ಈತ ಚಿತ್ರೀಕರಣದಿಂದ ಕೊಂಚ ಬಿಡುವು ಸಿಕ್ಕಾಗ ಒಂದು ಸಾಹಸ ಮಾಡಲು ಹೋಗಿ ಪೇಚಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಆತ ಮಾಡಿದ್ದು ಬೇರೇನೂ ಅಲ್ಲ. ದಿನದ 24 ಗಂಟೆಗಳ ಕಾಲ ಬಿಝಿಯಾಗಿರುವ ವಾಣಿಜ್ಯ ನಗರಿ ಮುಂಬೈನ ರಸ್ತೆಯಲ್ಲಿ ಆಟೋ ಚಲಾಯಿಸಿದ್ದು. ಮನಸ್ಸಿಗೆ ಖುಷಿ ಕಂಡದ್ದನ್ನು ಮಾಡುವ ಕ್ರೇಝ್ ಇರುವ ಸ್ಮಿತ್, ಕರಣ್ ಜೋಹರ್ ನ ಸ್ಟುಡೆಂಟ್ ಆಫ್ ದಿ ಇಯರ್ 2 ಚಿತ್ರಕ್ಕೆ ಮನಸ್ಸೋ ಇಚ್ಛೆ ನರ್ತಿಸಿದ್ದ. ಆನಂತರ ಅತನಿಗೆ ಅದೇನು ತೋಚಿತೋ, ತಕ್ಷಣ ರಸ್ತೆಗಿಳಿದು ಬಾಡಿಗೆ ರಿಕ್ಷಾವೊಂದನ್ನು ಗೊತ್ತು ಮಾಡಿಕೊಂಡು ತಾನೇ ಚಲಾಯಿಸಿದ. ರಿಕ್ಷಾ ಚಾಲಕ ಹಿಂದಿನ ಸೀಟಿನಲ್ಲಿ, ಸ್ಮಿತ್ ಚಾಲಕನ ಸೀಟಿನಲ್ಲಿ.

ಅಲ್ಲೇ ಎಡವಟ್ಟಾದದ್ದು. ಸ್ಮಿತ್ ಅಂದುಕೊಂಡಿದ್ದ ಇಲ್ಲಿ ತನ್ನನ್ನು ಯಾರೂ ಗುರುತು ಹಿಡಿಯಲಿಕ್ಕಿಲ್ಲ ಎಂದು. ಆದರೆ ಆತ ಆಟೋ ಸ್ಟಾರ್ಟ್ ಮಾಡಿ ಇನ್ನೇನು ಸ್ವಲ್ಪ ದೂರ ಹೋಗಬೇಕೆನ್ನುವಷ್ಟರಲ್ಲಿ ಜನ ಇದು ಹಾಲಿವುಡ್ ನ ಸ್ಮಿತ್ ಎಂದು ಪತ್ತೆ ಹಚ್ಚಿಯಾಗಿತ್ತು. ಅವಕಾಶ ಸಿಕ್ಕವರೆಲ್ಲ ಆತನ ಜೊತೆ ಫೋಟೋ ತೆಗೆದರು, ವಿಡಿಯೋ ಮಾಡಿದರು. ಅಭಿಮಾನಿಗಳ ಈ ಪ್ರೀತಿಯ ಬಲೆಯಿಂದ ತಪ್ಪಿಸಿಕೊಂಡು ಬರಲು ಆತನಿಗೂ ಸಾಕು ಸಾಕಾಯಿತು. ಆತ ರಿಕ್ಷಾ ಚಲಾಯಿಸುತ್ತಾ ಎಂಜಾಯ್ ಮಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...