alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಂಜು’ ಬಾಕ್ಸ್ ಆಫೀಸ್ ಓಟಕ್ಕೆ ಬ್ರೇಕ್ ಹಾಕುತ್ತಾ ‘ದಢಕ್’

ಸಂಜಯ್ ದತ್ ಬಯೋಪಿಕ್ ಸಂಜು ಸಿನಿಮಾ ಬಾಲಿವುಡ್ ನ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಆದ್ರೆ ಬಿಟೌನ್ ಮಂದಿಯ ಪ್ರಕಾರ ಸಂಜು ಓಟಕ್ಕೆ ದಢಕ್ ಬ್ರೇಕ್ ಹಾಕುವ ಸಾಧ್ಯತೆಗಳಿವೆ.

ಇಶಾನ್ ಕಟ್ಟರ್ ಮತ್ತು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಟಿಸಿರುವ ಚಿತ್ರ ಈಗ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಭಾರತದ 2235 ಸ್ಕ್ರೀನ್ ಮತ್ತು 556 ಓವರ್ಸೀಸ್ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಈಗಾಗ್ಲೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ಮೊದಲ ವಾರ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದ್ರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರವಾಗಲಿದೆ.

ಸಿನಿ ಮಾರುಕಟ್ಟೆಯ ಶೇಡಕಾ 30ರಷ್ಟು ಭಾಗವನ್ನು ಈಗ ದಢಕ್ ಸಿನಿಮಾ ಆವರಿಸಿದೆಯಂತೆ. ಜನರ ಅಭಿಪ್ರಾಯದ ಮೇಲೆ ಮುಂದಿನ ದಿನಗಳಲ್ಲಿ ಯಾವ ರೀತಿ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಟೇಕ್ ಆಫ್ ಆಗಲಿದೆ ಅನ್ನೋದು ನಿರ್ಧಾರವಾಗಲಿದೆಯಂತೆ.

ಈ ಬಗ್ಗೆ ಮಾತನಾಡಿರುವ ಸಿನಿಮಾ ನಿರ್ದೇಶಕ ಶಶಾಂಕ್ ಕೇತನ್ ಈಗಾಗ್ಲೇ ಸಿನಿಮಾ ಬಿಡುಗಡೆಯಾಗಿದೆ. ಹಾಗಾಗಿ ಸಿನಿಮಾದ ಯಶಸ್ಸು ಮತ್ತು ವೈಫಲ್ಯ ನಿರ್ಧಾರವಾಗೋದು ಸಿನಿ ಪ್ರೇಮಿಗಳಿಂದ. ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಗೆ ಚಿತ್ರದ ಬಗ್ಗೆ ಭರವಸೆ ಇದೆ. ಹಾಗಿದ್ದರು ಪ್ರೇಕ್ಷಕರು ಏನು ಹೇಳ್ತಾರೆ ಅನ್ನೋದೇ ಫೈನಲ್ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...