alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಕ್ಕೆ ಡಬ್ ಆಗುತ್ತಾ ಸೈರಾ ನರಸಿಂಹ ರೆಡ್ಡಿ…?

ಕಳೆದ 18 ತಿಂಗಳ ಅವಧಿಯಲ್ಲಿ ಐದು ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಡಬ್ಬಿಂಗ್ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸ್ಯಾಂಡಲ್ವುಡ್ ಗೆ ಹೀಗೊಂದು ನಡೆ ಅಚ್ಚರಿಯನ್ನುಂಟು ಮಾಡಿದೆ. ಅದರ ಜೊತೆಗೆ ಆತಂಕವವನ್ನು ಕೂಡ ಉಂಟು ಮಾಡಿದೆ.

ಕಳೆದ ವಾರವಷ್ಟೆ ತಮಿಳಿನ ವಿವೇಗಂ ಸಿನಿಮಾ ಕನ್ನಡದಲ್ಲಿ ಕಮಾಂಡೋ ಆಗಿ ಬಿಡುಗಡೆಯಾಗಿ ಎರಡನೇ ವಾರ ದಾಖಲೆಯ ಪ್ರದರ್ಶನ ಕಾಣ್ತಿದೆ. ಮೊದಲ ವಾರ ಇದ್ದ ಚಿತ್ರ ಮಂದಿರಗಳ ಸಂಖ್ಯೆಯನ್ನು ಈಗ ಹೆಚ್ಚಿಸಲಾಗಿದೆ. ಕರ್ನಾಟಕದ 80 ಚಿತ್ರ ಮಂದಿರಗಳಲ್ಲಿ ಕಮಾಂಡೋ ಪ್ರದರ್ಶನವಾಗ್ತಿದೆ.

ಈ ಬೆಳವಣಿಗೆಯನ್ನ ದೃಷ್ಟಿಯಲ್ಲಿಟ್ಟುಕೊಂಡೇ ಈಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಕಿಚ್ಚ ಸುದೀಪ್ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಹಾಗೆ ನೋಡಿದ್ರೆ ಬಾಹುಬಲಿ ಮತ್ತು ರುದ್ರಮ್ಮದೇವಿ ಸಿನಿಮಾಗಳು ಕೂಡ ಕನ್ನಡಕ್ಕೆ ಡಬ್ ಆಗುವ ಸಾಧ್ಯತೆ ಇತ್ತು. ಆದ್ರೆ ಸಂದರ್ಭ, ಸನ್ನಿವೇಶ ಅದಕ್ಕೆ ಪೂರಕವಾಗಿ ಇರಲಿಲ್ಲ.

ಆದ್ರೆ ಸದ್ಯ ಕಮಾಂಡೋ ಸಿನಿಮಾಗೆ ಸಿಕ್ಕಿರುವಂತಾ ಪ್ರತಿಕ್ರಿಯೆ ಪರಭಾಷಾ ಸಿನಿಮಾಗಳ ಡಬ್ಬಿಂಗ್ ಗೆ ಇರುವ ಆತಂಕವನ್ನು ದೂರ ಮಾಡುತ್ತಿರುವ ಹಾಗಿದೆ. ಕಾನೂನು ಪ್ರಕ್ರಿಯೆಯ ಮೂಲಕ ಡಬ್ಬಿಂಗ್ ಬ್ಯಾನ್ ಮಾಡದೆ ಇರೋದು ಸೈರಾ ಕನ್ನಡಕ್ಕೆ ಡಬ್ ಆಗುವ ಹಾದಿ ಸುಗಮಗೊಳಿಸಬಹುದಾಗಿದೆ. ಸದ್ಯ ಕೋರ್ಟ್ ಅಂಗಳದಲ್ಲೇ ಈ ವಿವಾದದ ಚೆಂಡಿದೆ. ಹಾಗಾಗಿ ಸೈರಾ ಕನ್ನಡದಲ್ಲೂ ಡಬ್ ಆಗಿ ಸುದೀಪ್ ಅವರ ಅಭಿನಯವನ್ನು ಅಭಿಮಾನಿಗಳು ನೋಡಬಹುದು ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...