alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಕಾಂಗ್ರೆಸ್ ಪರ ಡೈಲಾಗ್ ಡಿಲೆವರಿ ಮಾಡ್ತಾರಾ ಬಚ್ಚನ್…?

ಚಿತ್ರ ಜಗತ್ತಿನಲ್ಲಿ ಹೆಸರು ಮಾಡಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೊಮ್ಮೆ ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಈ ಹಿಂದೆ ಕಾಂಗ್ರೆಸ್ ಪ್ರಚಾರ ಮಾಡಿದ್ದಲ್ಲದೆ ಅಲಹಬಾದ್ ನಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು ಅಮಿತಾಬ್ ಬಚ್ಚನ್. ಅಹಮದಾಬಾದ್ ನಲ್ಲಿ ಹೇಮವತಿ ನಂದನ್ ಬಹುಗುಣ ಅವರನ್ನು ಸೋಲಿಸಿ ಸಂಸದರಾಗಿದ್ದ ಅಮಿತಾಬ್ ಬಚ್ಚನ್ ನಂತ್ರ ಕಾಂಗ್ರೆಸ್ ನಿಂದ ದೂರವಾದ್ರು. ನಂತ್ರ ಬಚ್ಚನ್ ಕುಟುಂಬ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿತ್ತು. ಜಯಾ ಬಚ್ಚನ್ ಸಂಸದರಾದ್ರು.

ಈಗ ಮತ್ತೆ ಅಮಿತಾಬ್ ಬಚ್ಚನ್ ಕಾಂಗ್ರೆಸ್ ನ ಕೆಲ ಮುಖಂಡರನ್ನು ಟ್ವೀಟರ್ ನಲ್ಲಿ ಫಾಲೋ ಮಾಡಲು ಶುರು ಮಾಡಿದ್ದಾರೆ. ಅವರ ಈ ಬೆಳವಣಿಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಮೊದಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಾಲೋ ಮಾಡಲು ಶುರು ಮಾಡಿದ ಬಚ್ಚನ್ ನಂತ್ರ ಪಿ ಚಿದಂಬರಂ, ಕಪಿಲ್ ಸಿಬಲ್, ಅಹ್ಮದ್ ಪಟೇಲ್ ಟ್ವೀಟರ್ ಫಾಲೋ ಮಾಡ್ತಿದ್ದಾರೆ. ಒಂದು ತಿಂಗಳಿಂದ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಅವರನ್ನು ಅಮಿತಾಬ್ ಫಾಲೋ ಮಾಡ್ತಿದ್ದಾರೆ.

ಕಾಂಗ್ರೆಸ್ ನ ಅನೇಕ ನಾಯಕರನ್ನು ಅಮಿತಾಬ್ ಬಚ್ಚನ್ ಫಾಲೋ ಮಾಡ್ತಿರುವುದು ಕಾಂಗ್ರೆಸ್ ನಾಯಕರನ್ನೂ ಆಶ್ಚರ್ಯಗೊಳಿಸಿದೆ. ಮತ್ತೆ ಅಮಿತಾಬ್ ಬಚ್ಚನ್ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...