alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಅಸ್ಥಿಯನ್ನು 2 ಬಾರಿ ವಿಸರ್ಜಿಸಲು ಕಾರಣವೇನು?

ಫೆಬ್ರವರಿ 24ರಂದು ನಿಧನರಾಗಿದ್ದ ನಟಿ ಶ್ರೀದೇವಿ ಅವರ ಅಸ್ಥಿಯನ್ನು ಪತಿ ಬೋನಿಕಪೂರ್ ಹರಿದ್ವಾರದಲ್ಲಿ ವಿಸರ್ಜನೆ ಮಾಡಿದ್ದಾರೆ. ಇದಕ್ಕೂ ಒಂದು ವಾರ ಮೊದಲು ಶ್ರೀದೇವಿ ಅಸ್ಥಿಯನ್ನು ರಾಮೇಶ್ವರಂನಲ್ಲಿ ವಿಸರ್ಜಿಸಲಾಗಿತ್ತು.

ಅಸ್ಥಿ ವಿಸರ್ಜನೆಯನ್ನು ಎರಡು ಬಾರಿ ಮಾಡಿರೋದಕ್ಕೆ ಕಾರಣವಿದೆ. 1993ರಲ್ಲಿ ಶ್ರೀದೇವಿ ಚಿತ್ರೀಕರಣಕ್ಕಾಗಿ ಹರಿದ್ವಾರಕ್ಕೆ ತೆರಳಿದ್ದರು. ಮತ್ತೊಮ್ಮೆ ಅಲ್ಲಿಗೆ ಬರುವುದಾಗಿ ಹೇಳಿದ್ದರಂತೆ. ಶ್ರೀದೇವಿ ಆಸೆಯನ್ನು ಈಡೇರಿಸಬೇಕು ಅನ್ನೋ ಕಾರಣಕ್ಕೆ ಬೋನಿ ಕಪೂರ್, ಆಕೆಯ ಅಸ್ಥಿಯನ್ನು ಹರಿದ್ವಾರಕ್ಕೆ ಕೊಂಡೊಯ್ದು ಗಂಗಾನದಿಯಲ್ಲಿ ವಿಸರ್ಜಿಸಿದ್ದಾರೆ.

ಸಹೋದರ ಅನಿಲ್ ಕಪೂರ್ ಹಾಗೂ ಶ್ರೀದೇವಿ ಆತ್ಮೀಯ ಸ್ನೇಹಿತರಾಗಿದ್ದ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಬೋನಿ ಕಪೂರ್ ಅವರೊಂದಿಗೆ ಹರಿದ್ವಾರಕ್ಕೆ ತೆರಳಿ, ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ.

ವಿವಿಐಪಿ ಘಾಟ್ ನಲ್ಲಿ ಕಪೂರ್ ಕುಟುಂಬದ ಅರ್ಚಕರಾದ ಶಿವ್ ಕುಮಾರ್ ಪಲಿವಲ್ ಹಾಗೂ ಮನೀಶ್ ಜೈಸ್ವಾಲ್ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದ್ರು. ಅಸ್ಥಿ ವಿಸರ್ಜನೆ ವೇಳೆ ಬೋನಿ ಕಪೂರ್ ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...