alex Certify
ಕನ್ನಡ ದುನಿಯಾ       Mobile App
       

Kannada Duniya

ಇದನ್ನು ಬಿಟ್ಟು ಸಾಕಷ್ಟು ಲಾಭ ಪಡೆದಿದ್ದಾರೆ ಅನುಷ್ಕಾ..!?

ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಅನುಷ್ಕಾ ಮಾಂಸಹಾರ ಸೇವನೆ ಮಾಡ್ತಿಲ್ಲ. ನಾನು ಸಸ್ಯಹಾರಿಯಾಗಿರುವುದು ಅತ್ಯುತ್ತಮ ನಿರ್ಧಾರವೆಂದು ಅನುಷ್ಕಾ ಹೇಳಿದ್ದಾರೆ.

ಪೀಪಲ್ಸ್ ಫಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಂಡಿರುವ ಅನುಷ್ಕಾ ಶರ್ಮಾ ಈ ಬಗ್ಗೆ ಹೇಳಿದ್ದಾರೆ. ನಾನು ಅನುಷ್ಕಾ ಶರ್ಮಾ, ನಾನು ಸಸ್ಯಹಾರಿ ಎನ್ನುತ್ತಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅನುಷ್ಕಾ ಸಸ್ಯಹಾರಿಯಾಗಿರುವುದು ತುಂಬಾ ಖುಷಿ ತಂದಿದೆ. ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಹೆಚ್ಚು ಶಕ್ತಿ ಹೊಂದಿದ್ದೇನೆ. ನನ್ನ ಆಹಾರಕ್ಕಾಗಿ ಇನ್ಮುಂದೆ ಯಾವುದೇ ಪ್ರಾಣಿ ಬಲಿ ಮಾಡುವುದಿಲ್ಲವೆಂದು ಅನುಷ್ಕಾ ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಪ್ರಾಣಿ ಹಿಂಸೆ ವಿರೋಧಿಸುವ ಜಾಹೀರಾತೊಂದರಲ್ಲೂ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಸಸ್ಯಹಾರ ತ್ಯಜಿಸಲು ಸಾಕು ನಾಯಿ ಕಾರಣವಂತೆ. ನಾಯಿಗೆ ಮಾಂಸ-ಮೀನಿನ ವಾಸನೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಅನುಷ್ಕಾ ಮಾಂಸ ತ್ಯಜಿಸಿದ್ದರಂತೆ. ಅನುಷ್ಕಾ ಒಂದೇ ಅಲ್ಲ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಸಸ್ಯಹಾರಿ. ಅವ್ರು ಬಾಲ್ಯದಲ್ಲಿಯೇ ಮಾಂಸಾಹಾರ ತ್ಯಜಿಸಿದ್ದಾರೆ. ಫಿಟ್ ಹಾಗೂ ಆರೋಗ್ಯವಾಗಿರಲು ಸಸ್ಯಹಾರ ಕಾರಣ ಎಂದು ಅಮಿತಾಬ್ ಬಲವಾಗಿ ನಂಬಿದ್ದಾರೆ.

ಸೋನಂ ಕಪೂರ್, ನೇಹಾ ಧೂಪಿಯಾ ಕೂಡ ಮಾಂಸಹಾರ ತ್ಯಜಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...