alex Certify
ಕನ್ನಡ ದುನಿಯಾ       Mobile App
       

Kannada Duniya

ರಾಖಿ ಸಾವಂತ್ ಗೆ ಗೊತ್ತಿದೆ ಹನಿಪ್ರೀತ್ ಅಡಗುದಾಣ..!

ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಹಾಗೂ ಬಾಯಿಬಡುಕಿ ರಾಖಿ ಸಾವಂತ್ ಇಬ್ಬರೂ ನೋಡೋಕೆ ಒಂದೇ ರೀತಿ ಕಾಣಿಸ್ತಾರೆ. ಪೊಲೀಸರು ಈಗ ಹನಿಪ್ರೀತ್ ಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸ್ತಿದ್ದಾರೆ.

ರಾಖಿ ಸಾವಂತ್ ಕೂಡ ಸುಮ್ಮನೆ ಕುಳಿತಿಲ್ಲ. ರಾಖಿಗೆ 7-8 ವರ್ಷಗಳಿಂದ ಹನಿಪ್ರೀತ್ ಪರಿಚಯವಂತೆ. ಅವಳ ಬಗ್ಗೆ ಎಲ್ಲವೂ ಗೊತ್ತು ಎನ್ನುತ್ತಿದ್ದಾಳೆ ರಾಖಿ. ಗುರ್ಮೀತ್ ರಾಮ್ ರಹೀಂ ಬಯೋಪಿಕ್ ನಲ್ಲಿ ರಾಖಿ, ಹನಿಪ್ರೀತ್ ಪಾತ್ರ ಮಾಡ್ತಿದ್ದಾಳಂತೆ. ಈ ಚಿತ್ರಕ್ಕೆ ರಾಖಿ ಮತ್ತವಳ ಸಹೋದರ ರಾಕೇಶ್ ಸಾವಂತ್ ನಿರ್ಮಾಪಕರು.

ಹನಿಪ್ರೀತ್ ನೇಪಾಳದಲ್ಲಿದ್ದಾಳೆ ಅಂದ್ಕೊಂಡು ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಆದ್ರೆ ಆಕೆ ನೇಪಾಳದಲ್ಲಿಲ್ಲ, ಲಂಡನ್ ನಲ್ಲಿ ಅಡಗಿದ್ದಾಳೆ ಎನ್ನುತ್ತಿದ್ದಾಳೆ ರಾಖಿ. ರಾಮ್ ರಹೀಂ ಬಯೋಪಿಕ್ ಗೆ ‘ಅಬ್ ಹೋಗಾ ಇನ್ಸಾಫ್’ ಅಂತಾ ಹೆಸರಿಡಲಾಗಿದೆ.

ರಾಜಾ ಮುರದ್, ರಾಮ್ ರಹೀಂ ಪಾತ್ರದಲ್ಲಿ ನಟಿಸಲಿದ್ದಾರೆ. ಏಜಾಜ್ ಖಾನ್ ತನಿಖಾಧಿಕಾರಿ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿಯಲ್ಲೇ ಚಿತ್ರದ ಶೂಟಿಂಗ್ ನಡೆಯಲಿದೆ ಅಂತಾ ರಾಖಿ ಸಾವಂತ್ ತಿಳಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...