alex Certify
ಕನ್ನಡ ದುನಿಯಾ       Mobile App
       

Kannada Duniya

ಐಐಎಫ್ಎ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್- ಯಶ್

yash radhika 88

ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಒಂದಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಜೋಡಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಎಲ್ಲಾ ಚಿತ್ರಗಳು ಯಶಸ್ವಿಯಾಗಿವೆ.

‘ಮೊಗ್ಗಿನ ಮನಸ್ಸು’, ‘ಡ್ರಾಮಾ’, ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ಯಲ್ಲಿ ರಾಧಿಕಾ ಪಂಡಿತ್ ಅವರೊಂದಿಗೆ ಯಶ್ ಕಾಣಿಸಿಕೊಂಡಿದ್ದು, ಮೂರೂ ಚಿತ್ರಗಳೂ ಭರ್ಜರಿ ಯಶಸ್ಸು ಕಂಡಿವೆ. ಇದೀಗ ಕೆ. ಮಂಜು ನಿರ್ಮಾಣದ ‘ಮಾಂಜಾ'(ಇನ್ನೂ ಟೈಟಲ್ ಫೈನಲ್ ಆಗಿಲ್ಲ) ಸಿನೆಮಾದಲ್ಲಿ ಈ ಜನಪ್ರಿಯ ಜೋಡಿ ಜೊತೆಯಾಗಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಸಿನೆಮಾಗಳಲ್ಲಿ ಮಾತ್ರ ಯಶಸ್ವಿ ಜೋಡಿಯಾಗಿಲ್ಲ, ನಿಜ ಜೀವನದಲ್ಲಿಯೂ ಇವರಿಬ್ಬರೂ ಜೊತೆಯಾಗಲಿದ್ದಾರೆ ಎನ್ನಲಾಗಿದೆ.

ಈ ನಡುವೆ ರಾಧಿಕಾ ಪಂಡಿತ್ ಹಾಗೂ ಯಶ್ ಒಟ್ಟಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಸಿನೆಮಾ ಕಾರ್ಯಕ್ರಮವಾಗಿರುವ ಐಐಎಫ್ಎ ಉತ್ಸವಂ ಪ್ರೋಗ್ರಾಂನಲ್ಲಿ ಯಶ್, ರಾಧಿಕಾ ಪಂಡಿತ್ ಜೊತೆಯಾಗಿಯೇ ಭಾಗವಹಿಸಿದ್ದರು. ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೌತ್ ಇಂಡಿಯಾ ಸಿನಿ ದುನಿಯಾದ ಬಹುತೇಕ ಕಲಾವಿದರು ಪಾಲ್ಗೊಂಡಿದ್ದರು. ಅಂದಹಾಗೇ ಈ ಕಾರ್ಯಕ್ರಮ ಇದೇ ಭಾನುವಾರ ಉದಯ ಟಿವಿ ಯಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...