alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆಲಸದವಳು ವಿದ್ಯಾ ಬಾಲನ್ ಹಂತಕಿ ಎಂದುಕೊಂಡಿದ್ದೇಕೆ..?

vidya

ವಿದ್ಯಾ ಬಾಲನ್ ಅಭಿನಯದ ‘ಕಹಾನಿ-2’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಸಾಮಾಜಿಕ ತಾಣಗಳಲ್ಲಿ ಪೋಸ್ಟರ್ ಈಗಾಗ್ಲೇ ಸುದ್ದಿ ಮಾಡಿದ್ದು, ವಿದ್ಯಾಗೆ ಅತ್ಯಂತ ಶಾಕಿಂಗ್ ಪ್ರತಿಕ್ರಿಯೆ ಸಿಕ್ಕಿದ್ದು ಮನೆಗೆಲಸದವಳಿಂದ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಕೆಲಸದವಳು ಬೇಸರದಲ್ಲಿದ್ಲು, ಅಷ್ಟೇ ಅಲ್ಲ ಅಕ್ಕಾ ಏನಾದ್ರೂ ಸಮಸ್ಯೆ ಇದ್ಯಾ ಪೊಲೀಸರ್ಯಾಕೆ ನಿಮ್ಮನ್ನು ಹುಡುಕ್ತಿದ್ದಾರೆ ಅಂತಾ ವಿದ್ಯಾರನ್ನು ಕೇಳಿದ್ಲಂತೆ.

ಅಂದು ವಿದ್ಯಾ ತುಂಬಾ ಉಲ್ಲಾಸದಿಂದ ಇದ್ದರಂತೆ, ಮನೆಗೆಲಸದವಳು ಬಂದು ಶಾಂತವಾಗಿ ಏನಾದ್ರೂ ಸಮಸ್ಯೆನಾ ಅಂತ ಕೇಳಿದಾಗ ಕಕ್ಕಾಬಿಕ್ಕಿಯಾದ್ರು. ಆಕೆ ತಮ್ಮನ್ನು ಕೊಲೆ ಆರೋಪಿ ಅಂತಾನೇ ಅಂದುಕೊಂಡಿದ್ಲು ಅನ್ನೋದನ್ನು ಯೋಚಿಸಿದಾಗೆಲ್ಲ ವಿದ್ಯಾ ನಗೆಗಡಲಲ್ಲಿ ತೇಲುತ್ತಾರೆ.

ಅಷ್ಟಕ್ಕೂ ಈ ಪೋಸ್ಟರ್ ನೋಡಿ ಮನೆಗೆಲಸದವಳಿಗೆ ಡೌಟ್ ಬಂದಿದ್ದು ಸಹಜ. ಪೋಸ್ಟರ್ ನಲ್ಲಿ ವಿದ್ಯಾರ ಭಾವಚಿತ್ರವಿದೆ, ಮೇಲ್ಗಡೆ ಅಪಹರಣ ಮತ್ತು ಕೊಲೆ ಎಂದು ಬರೆಯಲಾಗಿದೆ, ಕೆಳಗೆ ಹೆಸರು, ವಯಸ್ಸು, ಇತರ ವಿವರಗಳಿವೆ. ಹಾಗಾಗಿ ಈ ಫೋಟೋ ನೋಡಿ ಮನೆಗೆಲಸದಾಕೆ, ವಿದ್ಯಾ ಬಾಲನ್ ಸಮಸ್ಯೆಯಲ್ಲಿದ್ದಾರೆ ಎಂದುಕೊಂಡಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...