alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಲಕರಿಗೆ ಸುಳ್ಳು ಹೇಳಿ, ಸಹೋದರನ ನೆರವಿನಿಂದ ಪೋರ್ನ್ ಶೂಟ್ ಮಾಡಿದ್ಲು ಬೆಡಗಿ

ಪೋರ್ನ್ ಚಿತ್ರೋದ್ಯಮಕ್ಕೆ ಬರುವ ನಿರ್ಧಾರವನ್ನು ಸನ್ನಿ ಲಿಯೋನ್ ಅನಿವಾರ್ಯವಾಗಿ ತೆಗೆದುಕೊಂಡಿದ್ದಳು. 1999ರಲ್ಲಿ ಲಾಸ್ ಏಂಜಲೀಸ್ ನಲ್ಲಿ ವಾಸವಾಗಿದ್ದ ಸನ್ನಿ ಲಿಯೋನ್ ಕುಟುಂಬ ಸಂಕಷ್ಟ ಎದುರಿಸಬೇಕಾಯ್ತು. ಸನ್ನಿ ತಂದೆ ಕೆಲಸ ಕಳೆದುಕೊಂಡಿದ್ದರು. ಮೂರು ಹೊತ್ತಿನ ಊಟಕ್ಕಾಗಿ ತಾಯಿ ಬಂಗಾರ ಮಾರುವ ಸ್ಥಿತಿಗೆ ಬಂದಿದ್ದರು. ಮಗನ ರೂಮನ್ನು ಬಾಡಿಗೆಗೆ ನೀಡುವ ನಿರ್ಧಾರಕ್ಕೆ ತಂದೆ ಬಂದಿದ್ದರು. ಇದು ಸನ್ನಿಗೆ ಇಷ್ಟವಿರಲಿಲ್ಲ. ಹಾಗಾಗಿ ಸನ್ನಿ ಪೋರ್ನ್ ಚಿತ್ರೋದ್ಯಮಕ್ಕೆ ಕಾಲಿಡುವ ನಿರ್ಧಾರ ತೆಗೆದುಕೊಂಡಳು.

ಸನ್ನಿ ತನ್ನ ತಂದೆ-ತಾಯಿಗೆ ಸುಳ್ಳು ಹೇಳಿದ್ದಳು. ಆದ್ರೆ ಸಹೋದರನ ಮುಂದೆ ಸತ್ಯ ಹೇಳಿದ್ದಳು. ತಂದೆ-ತಾಯಿ ಬಳಿ ಮಾಡಲಿಂಗ್ ಮಾಡುತ್ತಿದ್ದೇನೆ. ಮೂರು ದಿನ ಅಲ್ಲಿರುತ್ತೇನೆಂದು ಸುಳ್ಳು ಹೇಳಿದ್ದ ಸನ್ನಿ ಲಿಯೋನ್ ಗೆ ರಾತ್ರಿ ನಿದ್ರೆ ಬರಲಿಲ್ಲವಂತೆ. ತಕ್ಷಣ ಸಹೋದರನ ಬಳಿ ಹೋಗಿ ಸತ್ಯ ಹೇಳಿದ್ದಳಂತೆ. ಆರಂಭದಲ್ಲಿ ಇದನ್ನು ವಿರೋಧಿಸಿದ್ದ ಸಹೋದರ ನಂತ್ರ ಒಪ್ಪಿಕೊಂಡನಂತೆ.

ಕಾಲೇಜಿಗೆ ಹೋಗ್ತಿದ್ದ 19ರ ಸನ್ನಿ ಮೊದಲ ಬಾರಿ ಪೋರ್ನ್ ಚಿತ್ರದಲ್ಲಿ ಕಾಣಿಸಿಕೊಂಡು ಮನೆಯವರಿಗೆ ನೆರವಾದ್ಲಂತೆ. ಬೇರೆ ಫ್ಲಾಟ್ ನಲ್ಲಿ ವಾಸವಾಗಿದ್ದ ಸನ್ನಿ ವಿಷ್ಯ ತಂದೆ-ತಾಯಿಗೆ ಗೊತ್ತಾಗಬಾರದು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದಳಂತೆ. ಕಾಲೇಜಿನ ಅಧ್ಯಾಪಕರೊಬ್ಬರು ಸನ್ನಿ ನಟಿಸಿದ್ದ ಪೋರ್ನ್ ನೋಡಿ ಪ್ರಿನ್ಸಿಪಾಲರಿಗೆ ದೂರು ನೀಡಿದ್ದರಂತೆ. ಆದ್ರೆ ಇದ್ರಿಂದ ಯಾವುದೇ ಸಮಸ್ಯೆಯಿಲ್ಲವೆಂದು ಪ್ರಿನ್ಸಿಪಾಲರು ಹೇಳಿದ್ದರಿಂದ ಸನ್ನಿ ನಿಯತಕಾಲಿಕೆಯೊಂದರ ಫೋಟೋಶೂಟ್ ಗೆ ಓಕೆ ಎಂದಿದ್ದಳಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...