alex Certify
ಕನ್ನಡ ದುನಿಯಾ       Mobile App
       

Kannada Duniya

‘ದಿ ವಿಲನ್’ ಚಿತ್ರದ ಹಾಡಿನ ಕುರಿತು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ಕಿಚ್ಚ ಸುದೀಪ್

ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾದ ಮೂರನೇ ಹಾಡು ಲವ್ ಆಗೋಯ್ತು ನಿನ್ ಮೇಲೆ ಲಿರಿಕಲ್ ವಿಡಿಯೋದೊಂದಿಗೆ ರಿಲೀಸ್ ಆಗಿದೆ. ಆಗಸ್ಟ್ 4ನೇ ತಾರೀಕಿನಂದು ಬೆಳಗ್ಗೆ 10 ಗಂಟೆಗೆ ಯೂಟ್ಯೂಬ್ನಲ್ಲಿ ರಿಲೀಸ್ ಆದ ಸಾಂಗ್ ಮೇಲೆ ಅಭಿಮಾನಿಗಳಿಗೂ ಲವ್ ಆಗೋಗ್ಬಿಟ್ಟಿದೆ. ಶನಿವಾರ ರಾತ್ರಿ ವೇಳೆಗೆ ಸುಮಾರು 3 ಲಕ್ಷ ಮಂದಿ ಹಾಡನ್ನ ನೋಡಿ, ಕೇಳಿ ಎಂಜಾಯ್ ಮಾಡಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಆಮಿ ಜಾಕ್ಸನ್ ಮೇಲೆ ಈ ಹಾಡಿನ ಚಿತ್ರೀಕರಣವನ್ನು ಪ್ರೇಮ್ ಈಗಾಗ್ಲೇ ಮಾಡಿ ಮುಗಿಸಿಬಿಟ್ಟಿದ್ದಾರಂತೆ. ಈಗ ಸುದೀಪ್, ಹಾಡಿನ ಕುರಿತಾದ ಇಂಟರೆಸ್ಟಿಂಗ್ ಮಾಹಿತಿಯೊಂದನ್ನ ಹೊರಗೆಡವಿದ್ದಾರೆ.

ಪ್ರೇಮ್ ಸಾಹಿತ್ಯ ಬರೆದಿರುವ ಈ ಹಾಡನ್ನ ಕೈಲಾಶ್ ಖೇರ್ ಅಥವಾ ದಲೇರ್ ಮೆಹಂದಿ ಅವರಿಂದ ಹಾಡಿಸಬೇಕು ಅಂತ ಮೊದಲು ನಿರ್ಧರಿಸಲಾಗಿತ್ತಂತೆ. ಆದ್ರೆ ಸುದೀಪ್, ಪ್ರೇಮ್ ಈ ಹಾಡನ್ನು ಹಾಡಬೇಕು ಅಂತ ಸೂಚಿಸಿದರಂತೆ. ಪ್ರೇಮ್ ಅವರ ಧ್ವನಿ ಈ ಹಾಡಿಗೆ ಪರ್ಫೆಕ್ಟ್ ಮ್ಯಾಚ್. ಪ್ರೇಮ್ ಹಾಡೋದ್ರಿಂದ ಹಾಡಿನ ರೇಂಜ್ ಬದಲಾಗುತ್ತದೆ ಅಂತ ಸುದೀಪ್ ಹೇಳಿದ್ದರಂತೆ.

ಹಾಗಾಗಿ ಪ್ರೇಮ್ ಲವ್ ಆಗೋಯ್ತು ಹಾಡನ್ನ ತಾವೇ ಹಾಡಿದ್ದಾರೆ. ಟೈಟಲ್ ಟ್ರ್ಯಾಕ್ ಮತ್ತು ಟಿಕ್ ಟಿಕ್ ಹಾಡಿನ ಹಾಗೆ ಲವ್ ಆಗೋಯ್ತು ಸಾಂಗ್ ಕೂಡ ಭರ್ಜರಿ ಹಿಟ್ ಆಗುವ ಲಕ್ಷಣಗಳಿವೆ. ಜನರಿಂದ ಸಿಕ್ಕಿರುವ ರೆಸ್ಪಾನ್ಸ್ ಗೆ ಚಿತ್ರ ತಂಡ ಖುಷಿಯಾಗಿದೆ. ಸದ್ಯ ಚಿತ್ರತಂಡ ಆಡಿಯೋ ಬಿಡುಗಡೆ ಮತ್ತು ಚಿತ್ರ ಬಿಡುಗಡೆಗಾಗಿ ಸಿದ್ಧತೆಯನ್ನು ನಡೆಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...