alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ಶಿಲ್ಪಾ ಶೆಟ್ಟಿಗೆ ಕಾದಿತ್ತು ಅಚ್ಚರಿ..!

shilpa-shetty-34444ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾರನ್ನು ವಿವಾಹವಾದ ಬಳಿಕ ಬಹುತೇಕ ಚಿತ್ರರಂಗವನ್ನು ತ್ಯಜಿಸಿದ್ದಾರೆ. ಅದರಲ್ಲೂ ಮಗು ಜನಿಸಿದ ಬಳಿಕ ಅವರು ತಮ್ಮ ಬಹುತೇಕ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ.

ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂದು ಕೇಳಿ ಬರುತ್ತಿದ್ದ ವದಂತಿಗಳಿಗೆ ಇತ್ತೀಚೆಗೆ ನಡೆದ ರಾಜ್ ಕುಂದ್ರಾ ಹುಟ್ಟು ಹಬ್ಬದ ಸಂಭ್ರಮದ ವೇಳೆ ಶಿಲ್ಪಾ ಶೆಟ್ಟಿ ಪತಿಯ ಹುಟ್ಟು ಹಬ್ಬವನ್ನು ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬಾಲಿವುಡ್ ಚಿತ್ರರಂಗ ಪ್ರವೇಶಿಸಿ ಹಲವು ವರ್ಷಗಳಾದರೂ ಈಗಲೂ ಬಳುಕುವ ಬಳ್ಳಿಯಂತಿರುವ 41 ವರ್ಷದ ಶಿಲ್ಪಾ ಶೆಟ್ಟಿ, ತಮ್ಮ ಸೌಂದರ್ಯದ ರಹಸ್ಯಕ್ಕೆ ಯೋಗವೇ ಕಾರಣವೆಂದು ಹೇಳಿಕೊಂಡಿದ್ದರಲ್ಲದೇ ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಹಾಗೂ ಪುಸ್ತಕವನ್ನೂ ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು.

ಟ್ರಾಫಿಕ್ ಸಿಗ್ನಲ್ ನಲ್ಲಿ ಅವರ ಕಾರು ನಿಂತಿದ್ದ ವೇಳೆ ಪುಸ್ತಕ ಮಾರಾಟಗಾರನೊಬ್ಬ ಶಿಲ್ಪಾ ಶೆಟ್ಟಿಯವರ ಪುಸ್ತಕವನ್ನೇ ಅವರಿಗೆ ಮಾರಲು ಮುಂದಾಗಿದ್ದಾನೆ. ಡಿಮ್ಯಾಂಡ್ ಇರುವ ಪುಸ್ತಕಗಳನ್ನಷ್ಟೇ ಇವರುಗಳು ಮಾರಾಟ ಮಾಡುವ ಕಾರಣ ತಮ್ಮ ಪುಸ್ತಕ ಈ ರೀತಿಯಲ್ಲಿ ಮಾರಾಟವಾಗುತ್ತಿರುವುದು ಶಿಲ್ಪಾ ಶೆಟ್ಟಿಯವರಿಗೆ ಸಂತಸ ತಂದಿದೆ. ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...