alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿಯೊಂದಿಗೆ ಪೋಷಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಂತೆ ಸಲ್ಮಾನ್…!

ಬಾಲಿವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಸಲ್ಮಾನ್ ಖಾನ್ ಆಫ್ ಸ್ಕ್ರೀನ್ ಲವ್ ಸ್ಟೋರಿಗಳು ಒಂದೆರೆಡಲ್ಲ. ಐಶ್ವರ್ಯ ರೈ, ಕತ್ರೀನಾ ಕೈಫ್, ಸಂಗೀತಾ ಬಿಜಲಾನಿ, ಸೋಮಿ ಅಲಿಯವರನ್ನ ದಾಟಿ ಈಗ ಲುಲಿಯಾ ವೆಂಟೂರ್ ಹತ್ತಿರಕ್ಕೆ ಬಂದು ನಿಂತಿದೆ.

ಆದ್ರೆ ಸಲ್ಲು ಅಭಿಮಾನಿಗಳು ಕತ್ರೀನಾ ಮತ್ತು ಸಲ್ಲು ಜೋಡಿಯನ್ನ ಹೆಚ್ಚು ಇಷ್ಟಪಡ್ತಾರೆ. ಅಷ್ಟೇ ಅಲ್ಲ ಅವರಿಬ್ಬರು ಮತ್ತೆ ಒಂದಾಗಬೇಕು ಅಂತ ಬಯಸ್ತಾರೆ. ಸದ್ಯಕ್ಕೆ ವಿಚಾರ ಏನಪ್ಪಾ ಅಂದ್ರೆ ಸಲ್ಮಾನ್ ತಾವು ಪ್ರೀತಿಸಿದ ಹುಡುಗಿಯೊಂದಿಗೆ ಪೋಷಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವಂತ ಘಟನೆಯ ಬಗ್ಗೆ ತಿಳಿಸಿದ್ದಾರೆ.

ಹಿಂದಿಯ ಖಾಸಗಿ ಮನರಂಜನಾ ವಾಹಿನಿಯ ದಸ್ ಕಾ ಧಮ್ ಷೋ ಹೋಸ್ಟ್ ಆಗಿರುವ ಸಲ್ಮಾನ್ ಇದೇ ವೇದಿಕೆಯಲ್ಲಿ ತಮ್ಮ ಪ್ರೀತಿಯ ನೆನಪೊಂದನ್ನ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ತಮ್ಮ ಸಂಗಾತಿಯೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದ ವೇಳೆ ದಿಢೀರನೆ ಆಕೆಯ ಪೋಷಕರು ಬಂದುಬಿಟ್ಟರಂತೆ. ಆಗ ಸಲ್ಲುಗೆ ಏನು ಮಾಡಬೇಕು…? ಎಲ್ಲಿ ಬಚ್ಚಿಟ್ಟುಕೊಳ್ಳಬೇಕು ಅನ್ನೋದು ಗೊತ್ತಾಗಲಿಲ್ಲವಂತೆ.

ಆದ್ರೆ ನಂತರದಲ್ಲಿ ಸಲ್ಮಾನ್ ಮುಜುಗರಪಟ್ಟುಕೊಳ್ಳುವಂತಾ ಸನ್ನಿವೇಶಗಳು ಏನೂ ನಡೆಯಲಿಲ್ಲವಂತೆ. ಪ್ರೇಯಸಿಯ ತಂದೆ ಸಲ್ಮಾನ್ ಖಾನ್ ರನ್ನ ಇಷ್ಟಪಟ್ಟರಂತೆ. ಘಟನೆಯನ್ನ ವಿವರಿಸುವ ವೇಳೆ ಸಲ್ಮಾನ್ ಯಾವ ಗರ್ಲ್ ಫ್ರೆಂಡ್ ಮನೆಯಲ್ಲಿ ಹೀಗೆ ತಾನು ಸಿಕ್ಕಿಹಾಕಿಕೊಂಡೆ ಅಂತ ಹೆಸರು ಹೇಳಲಿಲ್ಲ. ಈ ಘಟನೆ ತಮ್ಮ ಜೀವನದ ಸವಿನೆನಪುಗಳಲ್ಲಿ ಒಂದು ಅಂತ ಮೆನ್ಷನ್ ಮಾಡೋದನ್ನ ಸಲ್ಮಾನ್ ಮರೆಯಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...