alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗಾಗಿ ಸಾಕ್ಸ್ ಡಿಸೈನ್ ಮಾಡಲು ಮರೆತರಾ …?

ಸಾಮಾಜಿಕ ತಾಣಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ ಫೋಟೋಗಳೇ ಹರಿದಾಡ್ತಿವೆ. ಮದುವೆ, ಮೆಹಂದಿ ಹಾಗೂ ನಿಶ್ಚಿತಾರ್ಥದಲ್ಲಿ ವಿರಾಟ್ ಹಾಗೂ ಅನುಷ್ಕಾ ಧರಿಸಿದ್ದ ಉಡುಪುಗಳಂತೂ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಖ್ಯಾತ ಡಿಸೈನರ್ ಸಬ್ಯಸಾಚಿ ಈ ಧಿರಿಸುಗಳನ್ನು ಡಿಸೈನ್ ಮಾಡಿದ್ದಾರೆ. ಮದುವೆಯಲ್ಲಿ ಅನುಷ್ಕಾ ತಿಳಿ ಗುಲಾಬಿ ಬಣ್ಣ ಲೆಹಂಗಾ ಅದಕ್ಕೊಪ್ಪುವ ಸುಂದರ ಒಡವೆಗಳನ್ನು ಧರಿಸಿದ್ದರು. ಅದ್ಭುತ ಸೌಂದರ್ಯವತಿಯಂತೆ ಕಂಗೊಳಿಸುತ್ತಿದ್ದರು. ವಿರಾಟ್ ಕೊಹ್ಲಿ ಕೂಡ ಸಖತ್ ಹ್ಯಾಂಡ್ಸಮ್ ಆಗಿ ಕಂಡಿದ್ದು ಸುಳ್ಳಲ್ಲ.

ಅಪ್ಪಟ ರೇಷ್ಮೆ ಶೇರ್ವಾನಿ, ಅದಕ್ಕೊಪ್ಪುವ ಸುಂದರ ಪೇಟಾ, ಅನುಷ್ಕಾಳ ಡ್ರೆಸ್ ಗೆ ಮ್ಯಾಚ್ ಆಗುವಂತಿತ್ತು ಕೊಹ್ಲಿಯ ಡ್ರೆಸ್. ಇಬ್ಬರೂ ರಾಯಲ್ ಲುಕ್ ನಲ್ಲಿ ಮಿಂಚಿದ್ದಾರೆ. ಆದ್ರೆ ಮದುವೆ ಅವಸರದಲ್ಲಿ ಕೊಹ್ಲಿ ಮ್ಯಾಚಿಂಗ್ ಸಾಕ್ಸ್ ಧರಿಸೋದನ್ನೇ ಮರೆತುಬಿಟ್ಟಿದ್ರು. ಮಾಮೂಲಿ ಬೂದು ಬಣ್ಣ ಸಾಕ್ಸ್ ಧರಿಸಿದ್ರಿಂದ, ಫೋಟೋದಲ್ಲಿ ಅದು ಎದ್ದು ಕಾಣುತ್ತಿತ್ತು.

ವಧು-ವರರಿಗೆ ಡ್ರೆಸ್ ಡಿಸೈನ್ ಮಾಡಿರೋ ಸಬ್ಯಸಾಚಿ ಸಾಕ್ಸ್ ಮರೆತೇಬಿಟ್ಟಿದ್ದಾರೆ ಅಂತಾ ಎಲ್ಲರೂ ತಮಾಷೆ ಮಾಡಿದ್ದಾರೆ. ಬೂದು ಬಣ್ಣದ ಬದಲು ಬಿಳಿ ಸಾಕ್ಸನ್ನಾದ್ರೂ ಧರಿಸಿದ್ರೆ ಚೆನ್ನಾಗಿರುತ್ತಿತ್ತು ಅನ್ನೋದು ಫ್ಯಾಷನ್ ಪಂಡಿತರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...