alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ದೇಶಕನ ತಾಯಿಯ ಕಾಲಿಗೆ ಬಿದ್ದಿದ್ದರಂತೆ ಈ ಹಿರಿಯ ನಟ

ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ತಮ್ಮ ಓಪನ್ ಟಾಕ್ಸ್ ಗಳಿಂದಾಗಿ ಜನರ ಮಧ್ಯೆ ಹೆಚ್ಚು ಗಮನ ಸೆಳೀತಾರೆ. ವ್ಯಕ್ತಿ ಯಾರೇ ಅಗಿರಲಿ ತಪ್ಪು ಮಾಡಿದ ಸಂದರ್ಭದಲ್ಲಿ ಅದನ್ನು ಖಂಡಿಸುವ ನೇರವಂತಿಕೆಗೆ ರಿಷಿ ಕಪೂರ್ ರನ್ನ ಬಾಲಿವುಡ್ ಹೆಚ್ಚು ಇಷ್ಟಪಡುತ್ತೆ. ಬಾಲಿವುಡ್ ನ ನಿರ್ದೇಶಕ ಅನುರಾಗ್ ಬಸು ಅವರನ್ನ ವೃತ್ತಿಪರನಲ್ಲದ ನಿರ್ದೇಶಕ ಎಂದು ಈ ಹಿಂದೆ ರಿಷಿ ಕಪೂರ್ ಸಾರ್ವಜನಿಕವಾಗಿಯೇ ನಿಂದಿಸಿದ್ದರು.

ತಂದೆಯ ಈ ನೇರವಂತಿಕೆಯ ಮತ್ತೊಂದು ಸ್ವಾರಸ್ಯಕರ ವಿಚಾರವನ್ನು ಪುತ್ರ ರಣ್ಬೀರ್ ಕಪೂರ್ ಇತ್ತೀಚೆಗಷ್ಟೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಈ ವಿಚಾರ ಏನಪ್ಪಾ ಅಂದ್ರೆ ರಿಷಿ ಕಪೂರ್ ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜು ಸಿನಿಮಾದ ಕ್ಯಾಪ್ಟನ್ ಆಫ್ ದಿ ಶಿಪ್, ರಾಜ್ಕುಮಾರ್ ಹಿರಾನಿಯವರ ತಾಯಿಯ ಕಾಲಿಗೆ ಬಿದ್ದು, ನನ್ನ ಮಗನಿಗೆ ನಿಮ್ಮ ಮಗನ ಸಿನಿಮಾದಲ್ಲಿ ನಟಿಸೋಕೆ ಒಂದು ಅವಕಾಶ ಕೊಡಿ ಅಂತ ಕೇಳಿಕೊಂಡಿದ್ದರಂತೆ.

ರಾಜ್ಕುಮಾರ್ ಹಿರಾನಿ ತಮ್ಮ ಎರಡನೇ ಚಿತ್ರ ಲಗೇ ರಹೋ ಮುನ್ನಾಬಾಯ್ ಬಿಡುಗಡೆಯಾದ ಸಮಯದಲ್ಲಿ ಈ ಘಟನೆ ನಡೆದಿತ್ತಂತೆ. ಚಿತ್ರ ನೋಡಿದ ರಿಷಿ ಕಪೂರ್ ರಾಜ್ಕುಮಾರ್ ಹಿರಾನಿಯವರ ತಾಯಿಯ ಬಳಿ ತೆರಳಿ ಅವರ ಕಾಲಿಗೆ ಬಿದ್ದು ನಿಮ್ಮ ಮಗ ಜೀನಿಯಸ್ ಅಮ್ಮ. ಇಂದಲ್ಲಾ ನಾಳೆ ನನ್ನ ಮಗ ನಿಮ್ಮ ಮಗನ ಸಿನಿಮಾದಲ್ಲಿ ನಟಿಸ್ತಾನೆ ಅನ್ನೋ ನಿರೀಕ್ಷೆ ನನಗಿದೆ, ಅದಕ್ಕೆ ಅವಕಾಶ ಕಲ್ಪಿಸಿ ಅಂತ ವಿನಂತಿ ಮಾಡಿದ್ದರಂತೆ.

ಆ ಪ್ರಕಾರ ರಾಜ್ಕುಮಾರ್ ಹಿರಾನಿ ಪಿಕೆ ಸಿನಿಮಾದ ಅಂತ್ಯದಲ್ಲಿ ರಣ್ಬೀರ್ ಕಪೂರ್ ಗೆ ಒಂದು ಪಾತ್ರ ನೀಡಿದ್ದರಂತೆ. ಸದ್ಯ ರಾಜ್ಕುಮಾರ್ ಹಿರಾನಿ ಮತ್ತು ರಣ್ಬೀರ್ ಕಪೂರ್ ಕಾಂಬಿನೇಷನ್ ನ ಸಂಜು ಸಿನಿಮಾ ಬಾಲಿವುಡ್ ನ ಹಳೆಯ ದಾಖಲೆಗಳನ್ನೆಲ್ಲಾ ಮುರಿದು ಮುಂದೆ ಸಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...