alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ರಣ್ ವೀರ್ ಗೆ ನೀರಿಳಿಸಿದ ಬಾಬಾ ರಾಮ್ ದೇವ್

ranveer-baba

ನವದೆಹಲಿ: ಆಜ್ ತಕ್ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗಗುರು ಬಾಬಾ ರಾಮ್ ದೇವ್, ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ನೀರಿಳಿಸಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿದ್ದ ರಣ್ ವೀರ್ ನಿರೂಪಣೆ ಮಾಡುತ್ತಾ ರಾಮ್ ದೇವ್ ಅವರ ಬಳಿ ಬಂದಿದ್ದು, ಡ್ಯಾನ್ಸ್ ಮಾಡಲು ಆಹ್ವಾನಿಸಿದ್ದಾರೆ. ಇದಕ್ಕೆ ಒಪ್ಪಿದ ರಾಮ್ ದೇವ್ ವೇದಿಕೆ ಹತ್ತಿದವರೇ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿ, ‘ಬಾಜಿರಾವ್ ಮಸ್ತಾನಿ’ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅವರಂತೆಯೇ ಡ್ಯಾನ್ಸ್, ಯೋಗಾಸನ ಮಾಡಲು ಹೋದ ರಣವೀರ್ ಗೆ ಅದು ಸಾಧ್ಯವಾಗಿಲ್ಲ.

ವೇಗವಾಗಿ ಕಸರತ್ತು ತೋರಿದ ರಾಮ್ ದೇವ್, ಒಂದು ಹಂತದಲ್ಲಿ ರಣ್ ವೀರ್ ಸಿಂಗ್ ಅವರನ್ನು ಮೇಲೆತ್ತಿಕೊಂಡೇ ಹೆಜ್ಜೆ ಹಾಕಿದ್ದಾರೆ. ರಣ್ ವೀರ್ ಕೂಡ ರಾಮ್ ದೇವ್ ಅವರನ್ನು ಎತ್ತಿಕೊಳ್ಳಲು ಮುಂದಾದರೂ ಸಾಧ್ಯವಾಗಿಲ್ಲ. ಸೋಲೊಪ್ಪಿಕೊಂಡ ಅವರು, ರಾಮ್ ದೇವ್ ಅವರಿಗೆ ಕೈ ಮುಗಿದು ನಮಸ್ಕರಿಸಿ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...