alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟನ ಜೊತೆ ರೋಮ್ಯಾನ್ಸ್ ಮಾಡಲು ನಿರಾಕರಿಸಿದ್ಲಂತೆ ಕರೀನಾ

ಕಳೆದ ಎರಡು ವರ್ಷಗಳಿಂದ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಅಭಿನಯದ ಒಂದೂ ಚಿತ್ರ ತೆರೆ ಮೇಲೆ ಬಂದಿಲ್ಲ. ಕರೀನಾಳನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಜೂನ್ 1 ರವರೆಗೆ ಕಾಯಬೇಕು. ‘ವೀರೇ ದಿ ವೆಡ್ಡಿಂಗ್’ ಚಿತ್ರದ ಶೂಟಿಂಗ್ ನಲ್ಲಿ ಕರೀನಾ ಬ್ಯುಸಿಯಿದ್ದಾಳೆ. ಕರೀನಾ ಹೊಸ ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತಿರುವ  ಅಭಿಮಾನಿಗಳು ಕರೀನಾಳ ಹಳೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡ್ತಿದ್ದಾರೆ.

ಕರೀನಾ ಕಪೂರ್ ಖಾನ್ ಮೊದಲ ಚಿತ್ರ ‘ರೆಫ್ಯೂಜಿ’ ಬಗ್ಗೆಯೂ ಅಭಿಮಾನಿಗಳು ಮಾತನಾಡ್ತಿದ್ದಾರೆ. ರೆಫ್ಯೂಜಿ ಚಿತ್ರದಲ್ಲಿ ಕರೀನಾ, ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದಾಳೆ. ಇಬ್ರದ್ದೂ ಮೊದಲ ಚಿತ್ರ. ಚಿತ್ರವನ್ನು ಜೆ.ಪಿ. ದತ್ತಾ ನಿರ್ದೇಶನ ಮಾಡಿದ್ರು. ಈ ಚಿತ್ರದಲ್ಲಿ ಅಭಿಷೇಕ್ ಜೊತೆ ಕರೀನಾ ರೋಮ್ಯಾನ್ಸ್ ಮಾಡ್ತಾಳೆ.

ಶೂಟಿಂಗ್ ಗೂ ಮುನ್ನ ಕರೀನಾ ಹೇಳಿದ್ದ ಮಾತು ಈಗ್ಲೂ ಚರ್ಚೆಯಲ್ಲಿದೆ. ಕರೀನಾ, ಅಭಿಷೇಕ್ ಜೊತೆ ರೋಮ್ಯಾನ್ಸ್ ಮಾಡಲು ಹಿಂದೇಟು ಹಾಕಿದ್ದಳಂತೆ. ಜೆ.ಪಿ ಅಂಕಲ್, ಈತ ನನ್ನ ಸಹೋದರನಂತಿದ್ದಾನೆ. ಈತನ ಜೊತೆ ಹೇಗೆ ರೋಮ್ಯಾನ್ಸ್ ಮಾಡುವುದು ಎಂದು ಕರೀನಾ ಹೇಳಿದ್ದಳಂತೆ. ಇದನ್ನು ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ಹೇಳಿದ್ದರು. ಅದ್ರ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...