alex Certify
ಕನ್ನಡ ದುನಿಯಾ       Mobile App
       

Kannada Duniya

ಕರಣ್ ಮೊಬೈಲ್ ಕದ್ದು ಮೆಸೇಜ್ ಓದ್ತಾರೆ ಈ ನಟ…!

ನಟ ರಣಬೀರ್ ಕಪೂರ್ ಒಂದಿಲ್ಲೊಂದು ವಿವಾದದಲ್ಲಿ ಸಿಲುಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರೊಬ್ಬ ಫೋನ್ ಕಳ್ಳ ಅನ್ನೋದನ್ನು ನಿರ್ದೇಶಕ ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ಕರಣ್ ಜೋಹರ್ ಫೋನನ್ನೇ ರಣಬೀರ್ ಕದ್ದು, ಅದರಲ್ಲಿರೋ ಮೆಸೇಜ್ ಗಳನ್ನು ಓದುತ್ತಿದ್ರಂತೆ.

ಇದರಿಂದ ಕರಣ್ ಕೋಪಗೊಂಡು ಕೂಗಾಡಿದ್ದು ಕೂಡ ಇದೆ. ಯಾವುದೇ ಪಾಸ್ವರ್ಡ್ ಇಟ್ರೂ ರಣಬೀರ್ ಅದನ್ನು ಕಂಡು ಹಿಡಿದು ಮೊಬೈಲ್ ನಲ್ಲಿರೋ ಮೆಸೇಜ್ ಓದ್ತಾರೆ. ಬಹುಷಃ ಪಾಸ್ವರ್ಡ್ ಕಂಡುಹಿಡಿಯೋ ಕಂಪನಿಯಲ್ಲಿ ರಣಬೀರ್ ಕೆಲಸ ಮಾಡ್ತಿರಬಹುದು ಅಂತಾ ಕರಣ್ ಜೋಹರ್ ಹೇಳಿದ್ದಾರೆ.

ಕರಣ್ ಜೋಹರ್ ಬಾಲಿವುಡ್ ನ ಮಲ್ಟಿ ಟ್ಯಾಲೆಂಟೆಡ್ ವ್ಯಕ್ತಿ. ನಟನೆ, ನಿರ್ದೇಶನ, ನಿರೂಪಣೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಈಗ ಕರಣ್ ರೇಡಿಯೋ ಜಾಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇಶ್ಕ್ 104.8 ಎಫ್ ಎಂ ನಲ್ಲಿ ಕರಣ್ ಲವ್ ಗುರು ಅನ್ನೋ ಕಾರ್ಯಕ್ರಮ ನಡೆಸಿಕೊಡ್ತಿದ್ದಾರೆ.

ಲವ್ ಗುರು ಶೋನಲ್ಲಿ ಕರಣ್ ಜೋಹರ್, ಮೊಬೈಲ್ ಕಳ್ಳ ರಣಬೀರ್ ಬಗ್ಗೆ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಹಾಗೂ ‘ಬಾಂಬೆ ವೆಲ್ವೆಟ್’ ಚಿತ್ರದಲ್ಲಿ ರಣಬೀರ್ ನಟಿಸಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...