alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೀನಮ್ಮ’ ನೆನಪನ್ನು ಟ್ವಿಟ್ಟರ್‌ನಲ್ಲಿ ಮೆಲುಕು ಹಾಕಿದ ದೀಪಿಕಾ

ಮೀನಮ್ಮ ಅಂದರೆ ಪಕ್ಕನೆ ನೆನಪಾಗುವುದು ದೀಪಿಕಾ ಪಡುಕೋಣೆ. ಯಾವ ಮೀನಮ್ಮ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಡಿ. ಚೆನ್ನೈ ಎಕ್ಸ್‌ಪ್ರೆಸ್‌ ಚಿತ್ರದಲ್ಲಿ ತಮಿಳುನಾಡಿನ ಬೆಡಗಿಯಾಗಿ ಶಾರುಕ್ ಖಾನ್‌ ಮನಗೆದ್ದ ಮೀನಮ್ಮ ಇದೀಗ, ಚಿತ್ರದಲ್ಲಿನ ಕ್ಷಣಗಳನ್ನು ಟ್ವೀಟ್‌ ಮೂಲಕ ನೆನಪಿಸಿಕೊಂಡಿದ್ದಾರೆ.

ಈ ನೆನಪಿಗೂ ಒಂದು ಕಾರಣ ಇದೆ. ಕಾಮಿಡಿ ಮತ್ತು ಆಕ್ಷನ್‌ ಮೂವಿಯಲ್ಲಿ ಹೆಚ್ಚಿನ ಜನರ ಮನ ಗೆದ್ದಿದ್ದ ಚೆನ್ನೈ ಎಕ್ಸ್‌ಪ್ರೆಸ್‌ ಬಿಡುಗಡೆಗೊಂಡು 5 ವರ್ಷಗಳಾಗಿವೆ. ಈ ಖುಷಿಯನ್ನು ದೀಪಿಕಾ ಪಡುಕೊಣೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರೀಕರಣದ ವೇಳೆ ನಡೆದ ಹಾಸ್ಯದ ಕ್ಷಣಗಳ ವಿಡಿಯೋಗಳನ್ನು ದೀಪಿಕಾ ಟ್ವಿಟ್ಟರ್‌ನಲ್ಲಿ ಹಾಕಿ, ಮತ್ತೊಮ್ಮೆ ಎಲ್ಲರಲ್ಲಿ ನಗೆ ತರಿಸಿದ್ದಾಳೆ. 2013 ರಲ್ಲಿ ಅತ್ಯಧಿಕ ಸಂಪಾದನೆ ಮಾಡಿದ ಚಿತ್ರಗಳಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ ಸಹ ಒಂದು. ಭೂಗತ ದೊರೆಯ ಮಗಳನ್ನು(ಮೀನಮ್ಮ) ರೈಲ್ವೇ ನಿಲ್ದಾಣದಲ್ಲಿ ಭೇಟಿಯಾಗುವ ರಾಹುಲ್‌(ಶಾರುಕ್ ಖಾನ್‌) ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಈ ವೇಳೆ ಅನೇಕ ಹಾಸ್ಯ ಸನ್ನಿವೇಶ ಚಿತ್ರ ರಸಿಕರ ಮನ ಗೆದ್ದಿದ್ದವು. ಅದೂ ಅಲ್ಲದೆ, ಮೀನಮ್ಮಳ ಹಿಂದಿ ಮಾತಿನ ಧಾಟಿ ಇನ್ನಷ್ಟು ಖ್ಯಾತಿ ಪಡೆದಿತ್ತು.

when a possessed Meenamma took over the sets of #ChennaiExpress😝😝😝

A post shared by Deepika Padukone (@deepikapadukone) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...