alex Certify
ಕನ್ನಡ ದುನಿಯಾ       Mobile App
       

Kannada Duniya

ನಟನ ಬಳಿ ‘ಅದನ್ನು’ ತೋರಿಸು ಅಂದಿದ್ನಂತೆ ನಿರ್ದೇಶಕ

ಬಾಲಿವುಡ್‍ನ ನಟರೊಬ್ಬರು “ನಾನೂ ಒಮ್ಮೆ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೆ” ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಅಂದ ಹಾಗೆ ಇದನ್ನು ಹೇಳಿಕೊಂಡ ನಟ ಆಯುಷ್ಮಾನ್ ಖುರಾನಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರಿಗೆ, “ನೀವು ಆಡಿಷನ್‍ನಲ್ಲಿ ಯಾವತ್ತಾದರೂ ಫಜೀತಿಗೆ ಒಳಗಾಗಿದ್ದೀರಾ? ಆ ಪರಿಸ್ಥಿತಿಯನ್ನು ಹೇಗೆ ಎದುರಿಸಿದಿರಿ?” ಎಂಬ ಪ್ರಶ್ನೆ ಕೇಳಿದಾಗ ಅವರು ಈ ಬಗ್ಗೆ ಬಾಯಿಬಿಟ್ಟಿದ್ದಾರೆ.

ಒಮ್ಮೆ ಸಲಿಂಗ ಕಾಮಿ ನಿರ್ದೇಶಕನೊಬ್ಬ ನಡೆಸಿದ್ದ ಆಡಿಷನ್‍ನಲ್ಲಿ ಆತ, “ನನಗೆ ನಿನ್ನ ಅದನ್ನು ತೋರಿಸು, ನಾನದನ್ನು ಫೀಲ್ ಮಾಡ್ಲಾ?” ಎಂದು ಕೇಳಿದ್ದ. ಆಗ ನಾನು “ಏನ್ ಮಾತಾಡ್ತಿದೀರಿ, ಆರ್ ಯೂ ಸೀರಿಯಸ್?” ಎಂದು ಆತನಿಗೆ ಲಘುವಾಗಿ ಗದರಿದ್ದೆ. ಬಳಿಕ ಡೈಲಾಗ್ ಕೇಳಿದರೆ ಆ ನಿರ್ದೇಶಕ, ಇಂಡಸ್ಟ್ರಿಯಲ್ಲಿ ಹೇಗಿರಬೇಕು ಎಂಬ ಬಗ್ಗೆ ದೊಡ್ಡ ಭಾಷಣವನ್ನೇ ಬಿಗಿದಿದ್ದ ಎಂದು ಆಯುಷ್ಮಾನ್ ಹೇಳಿಕೊಂಡಿದ್ದಾರೆ.

ಅಲ್ಲದೆ ಇನ್ನೂ ಒಂದು ಇಂಥದ್ದೇ ಫಜೀತಿಯ ಪ್ರಸಂಗದ ಬಗ್ಗೆಯೂ ಅವರು ಮಾತನಾಡಿದ್ದಾರೆ. ವೀರ್ಯದಾನ ಹಾಗೂ ನಪುಂಸಕತೆಯ ಕತೆಯುಳ್ಳ “ವಿಕಿ ಡೋನರ್” ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಆಯುಷ್ಮಾನ್, ಅದು ಬಿಡುಗಡೆಯಾದ ಕೆಲದಿನಗಳಲ್ಲಿ ತಾಯಿಯೊಂದಿಗೆ ಮಾಲ್‍ವೊಂದಕ್ಕೆ ಹೋಗಿದ್ದರಂತೆ. ಆಗ ಇದ್ದಕ್ಕಿದ್ದಂತೆ ಆಯುಷ್ಮಾನ್ ಬಳಿಗೆ ಬಂದ ಯುವತಿಯೊಬ್ಬಳು, “ವಿಕಿ.. ಐ ನೀಡ್ ಯುವರ್ ಸ್ಪರ್ಮ್” ಎಂದು ಕೇಳಿದ್ದಳಂತೆ. ಆಗ ದಿಗ್ಭ್ರಾಂತರಾದ ಅಮ್ಮ, “ಇದೇನ್ ಕೆಲ್ಸ ಮಾಡಿದಿ ಮಗನೇ” ಎಂದು ಪ್ರಶ್ನಿಸಿದ್ದನ್ನು ಆಯುಷ್ಮಾನ್ ನೆನಪಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...