alex Certify
ಕನ್ನಡ ದುನಿಯಾ       Mobile App
       

Kannada Duniya

ತಮಾಷೆಯಾಗಿದೆ ಶಾರೂಖ್ ಮನೆಯಲ್ಲಿ ನಡೆದ ಈ ಘಟನೆ

srk-fan-song-480

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಸದ್ಯ ‘ಫ್ಯಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶಾರೂಖ್- ಕಾಜೋಲ್ ಜೋಡಿ ಅಭಿನಯದ ರೋಹಿತ್ ಶೆಟ್ಟಿ ನಿರ್ದೇಶನದ ‘ದಿಲ್ ವಾಲೇ’ ಚಿತ್ರ ನಿರೀಕ್ಷಿತ ಮಟ್ಟ ಮುಟ್ಟದ ಕಾರಣ ‘ಫ್ಯಾನ್’ ಚಿತ್ರದ ಕುರಿತು ಶಾರೂಖ್ ಆಪಾರ ಮುತುವರ್ಜಿ ವಹಿಸಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಪತ್ರಿಕಾಗೋಷ್ಟಿ ನಡೆದ ವೇಳೆ, ಅಭಿಮಾನಿಗಳಿಂದ ಶಾರೂಖ್ ಗೆ ಆದ ಸಿಹಿ ಹಾಗೂ ಕಹಿ ಘಟನೆಗಳ ಕುರಿತಂತೆ ಪತ್ರಕರ್ತರು ಪ್ರಶ್ನಿಸಿದ್ದಾರೆ. ಅಭಿಮಾನಿಗಳ ಕುರಿತಂತೆ ಸಾಫ್ಟ್ ಆಗಿ ಮಾತನಾಡಿದ ಶಾರೂಖ್, ತಮ್ಮ ಅಭಿಮಾನಿಗಳು ಯಾವತ್ತೂ ಮುಜುಗರದ ಪರಿಸ್ಥಿತಿಯನ್ನು ತಮಗೆ ತಂದೊಡ್ಡಿಲ್ಲವೆಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಶಾರೂಖ್ ಖಾನ್ ತಮ್ಮ ಮನೆಯಲ್ಲಿ ನಡೆದ ತಮಾಷೆಯ ಘಟನೆಯೊಂದನ್ನು ಹೇಳಿದ್ದು, ಒಮ್ಮೆ ವ್ಯಕ್ತಿಯೊಬ್ಬ ರಾತ್ರಿ ವೇಳೆ ಅಕ್ರಮವಾಗಿ ಶಾರೂಖ್ ಖಾನ್ ನಿವಾಸ ಪ್ರವೇಶಿಸಿ ಬಟ್ಟೆ ಕಳಚಿ ಅವರ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿದ್ದನಂತೆ. ಕೂಡಲೇ ಸೆಕ್ಯುರಿಟಿಯವರು ಓಡಿ ಬಂದು ಆತನನ್ನು ಹಿಡಿದುಕೊಂಡಿದ್ದಾರೆ.

ಗಲಾಟೆ ಕೇಳಿ ಮನೆಯೊಳಗಿದ್ದ ಶಾರೂಖ್ ಖಾನ್ ಸಹ ಹೊರ ಬಂದರಂತೆ. ಈ ವೇಳೆ ಆ ವ್ಯಕ್ತಿ ನಾನು ಶಾರೂಖ್ ಖಾನ್ ಅವರ ಮನೆಯ ಈಜು ಕೊಳದಲ್ಲಿ ಈಜಾಡಬೇಕಿತ್ತು ಅಷ್ಟೇ. ಅದಕ್ಕೆ ಬಂದಿದ್ದೆ ಎಂದನಂತೆ. ಆತ ಶಾರೂಖ್ ಖಾನ್ ಜೊತೆ ಫೋಟೋ ತೆಗೆಸಿಕೊಳ್ಳುವುದಿರಲಿ ಆಟೋಗ್ರಾಫ್ ಕೂಡಾ ಪಡೆದುಕೊಳ್ಳದೇ ಅಲ್ಲಿಂದ ತೆರಳಿದನಂತೆ. ಈ ಘಟನೆ ಹೇಳಿಕೊಂಡು ಶಾರೂಖ್ ಮನಸಾರೆ ನಕ್ಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...