alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಂಡ್ತಿ ಜೊತೆ ಲವ್ವಿದ್ರೆ ನನ್ ಜೊತೆ ಮಾಡಿದ್ದೇನು? ಕ್ರಿಕೆಟಿಗ ಶ್ರೀಶಾಂತ್‍ಗೆ ಮಾಜಿ ಗೆಳತಿಯ ಖಡಕ್ ಪ್ರಶ್ನೆ

ಬಿಗ್‍ಬಾಸ್ 12 ರಲ್ಲಿ ಸ್ಪರ್ಧಿಯಾಗಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್‍ಗೆ ಟೈಮ್ ಸರಿ ಇದ್ದಂತಿಲ್ಲ. ಏಕೆಂದರೆ ತಮ್ಮ ಲವ್ ಸ್ಟೋರಿ ಹೇಳಲು ಹೋಗಿ ತಾವಾಗಿಯೇ ತೊಂದರೆ ತಂದುಕೊಂಡಿದ್ದಾರೆ. ಅದಕ್ಕೆಲ್ಲ ಕಾರಣ ಅವರ ಹಳೇ ಪ್ರೇಮ ಪುರಾಣ.

ಬಿಗ್‍ಬಾಸ್ ಮನೆಯೊಳಗಿದ್ದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಶ್ರೀಶಾಂತ್ ತಮ್ಮ ಪತ್ನಿ ಭುವನೇಶ್ವರಿ ಕುಮಾರಿ ಹಾಗೂ ಆಕೆಯೊಂದಿಗಿನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನು ನೋಡಿದ ಮಾಜಿ ಗರ್ಲ್‍ಫ್ರೆಂಡ್ ನಿಕೇಶಾ ಪಟೇಲ್ ಈಗ ಶ್ರೀಶಾಂತ್ ವಿರುದ್ಧ ಕೆರಳಿದ್ದಾರೆ.

ಮದುವೆಗೂ ಮುನ್ನ ಏಳು ವರ್ಷಗಳಿಂದ ಭುವನೇಶ್ವರಿಯನ್ನು ಪ್ರೀತಿಸುತ್ತಿದ್ದೆ ಎಂದು ಶ್ರೀಶಾಂತ್ ಸುದ್ದಿವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದರು. ಇದನ್ನು ಪ್ರಸ್ತಾಪಿಸಿ ಅಚ್ಚರಿ ವ್ಯಕ್ತಪಡಿಸಿರುವ ನಿಕೇಶಾ, ಶ್ರೀಶಾಂತ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಶ್ರೀಶಾಂತ್ ಅದೇ ಸಮಯಲ್ಲಿ ನನ್ನೊಂದಿಗೆ ಒಂದು ವರ್ಷಕ್ಕೂ ಅಧಿಕ ಕಾಲ ಸಂಬಂಧ ಹೊಂದಿದ್ದೇಕೆ? ಅಷ್ಟಕ್ಕೂ ಭುವನೇಶ್ವರಿ ಜೊತೆ ಆಗ ಲವ್ ಇದ್ದಿದ್ದರೆ, ನನ್ನೊಂದಿಗೆ ಮಾಡಿದ್ದೇನು? ಎಂದು ಖಡಕ್ಕಾಗಿ ಪ್ರಶ್ನಿಸಿದ್ದಾರೆ.

ಐದು ವರ್ಷಗಳ ಹಿಂದೆಯೇ ನಮ್ಮ ಲವ್ ಬ್ರೇಕಪ್ ಆಗಿದೆ ಎನ್ನುವ ನಿಕೇಶಾ, “ಶ್ರೀಶಾಂತ್ ತನ್ನನ್ನು ಸಂಭಾವಿತನಂತೆ ಬಿಂಬಿಸಿಕೊಳ್ಳುತ್ತಾನೆ. ಆದರೆ ಅವನಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ” ಎಂದೂ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...