alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಟ್ಯಾಟೂ ಬಗ್ಗೆ ಹೊರಬಿತ್ತು ಸತ್ಯ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಗೂ ಮುನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ಹೆಸರಿನಲ್ಲಿ ಹಾಕಿಸಿಕೊಂಡಿದ್ದ ಟ್ಯಾಟೂ ತೆಗೆಸುತ್ತಾಳೆಂಬ ಸುದ್ದಿಯಿತ್ತು. ಕೆಲವರು ಟ್ಯಾಟೂ ತೆಗೆಸಿದ್ದಾಳೆಂದು ಸುದ್ದಿ ಮಾಡಿದ್ರೆ ಮತ್ತೆ ಕೆಲವರು ಟ್ಯಾಟೂವಿನಲ್ಲಿ ಬದಲಾವಣೆ ಮಾಡಿದ್ದಾಳೆ ಎಂದಿದ್ದರು. ಆದ್ರೀಗ ಸತ್ಯ ಬಹಿರಂಗವಾಗಿದೆ.

ದೀಪಿಕಾ ಪಡುಕೋಣೆ ಗುರುವಾರ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಕೂದಲನ್ನು ಮೇಲಕ್ಕೆ ಕಟ್ಟಿದ್ದರಿಂದ ದೀಪಿ ಟ್ಯಾಟೂ ಸ್ಪಷ್ಟವಾಗಿ ಕಾಣಿಸಿದೆ. ದೀಪಿಕಾ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹಾಗಾಗಿ ಟ್ಯಾಟೂ ವಿಚಾರ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ದೀಪಿಕಾ ಪಡುಕೋಣೆ ನವೆಂಬರ್ ನಲ್ಲಿ ರಣವೀರ್ ಸಿಂಗ್ ಕೈ ಹಿಡಿಯಲಿದ್ದಾಳೆ. ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಮದುವೆಗಾಗಿ ಸಿನಿಮಾ ಒಪ್ಪಿಕೊಳ್ಳದ ದೀಪಿ, ಮದುವೆಗೆ ಒಂದು ವಾರವಿರುವಾಗ ಬೆಂಗಳೂರಿಗೆ ಬರಲಿದ್ದಾಳೆ. ದೀಪಿಕಾ ಮನೆಯಲ್ಲಿ ಮದುವೆಗೂ ಮುನ್ನ ನಂದಿ ಪೂಜೆ ನಡೆಯಲಿದ್ದು, ಅದ್ರಲ್ಲಿ ರಣವೀರ್ ಪಾಲ್ಗೊಳ್ಳಲಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...