alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಭೇಟಿ ವೇಳೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್ ಗೆ ಟೀಕೆ

priyanka-chopra-modi-759ಪ್ರಧಾನಿ ನರೇಂದ್ರ ಮೋದಿ ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬರ್ಲಿನ್ ಗೆ ಭೇಟಿ ನೀಡಿದ್ದ ವೇಳೆ ತಮ್ಮ ಹಾಲಿವುಡ್ ಚಿತ್ರ ‘ಬೇವಾಚ್’ ಪ್ರಚಾರಾರ್ಥವಾಗಿ ಅಲ್ಲಿಗೆ ತೆರಳಿದ್ದ ನಟಿ ಪ್ರಿಯಾಂಕಾ ಚೋಪ್ರಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.

ಮೋದಿಯವರನ್ನು ಭೇಟಿ ಮಾಡಿದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪ್ರಿಯಾಂಕಾ ಚೋಪ್ರಾ, ಕೆಲ ಫೋಟೋಗಳನ್ನೂ ಅಪ್ಲೋಡ್ ಮಾಡಿದ್ದರು. ಮೋದಿಯವರ ಭೇಟಿ ವೇಳೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್ ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊಣಕಾಲುದ್ದದ ಡ್ರೆಸ್ ಧರಿಸಿದ್ದ ಪ್ರಿಯಾಂಕಾ ಕುಳಿತಿದ್ದ ರೀತಿಗೂ ಟೀಕೆ ಕೇಳಿ ಬಂದಿವೆ. ದೇಶದ ಉನ್ನತ ನಾಯಕರನ್ನು ಭೇಟಿ ಮಾಡುವಾಗ ಯಾವ ರೀತಿ ಇರಬೇಕೆನ್ನುವ ಪ್ರಜ್ಞೆಯೂ ಪ್ರಿಯಾಂಕಾಗಿಲ್ಲವೆಂಬ ಮಾತುಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದರು.

ಇದಕ್ಕೆ ತಿರುಗೇಟು ನೀಡುವಂತೆ ಪ್ರಿಯಾಂಕಾ ಈಗ ಇನ್ಸ್ಟಾಗ್ರಾಂ ನಲ್ಲಿ ಮತ್ತೊಂದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತವರ ತಾಯಿ ಮಧು ಚೋಪ್ರಾ ಇದ್ದು, ಮಧು ಚೋಪ್ರಾ ಸ್ಕರ್ಟ್ ಧರಿಸಿದ್ದಾರೆ. ಇದಕ್ಕೆ Legs for days ಎಂದು ಪ್ರಿಯಾಂಕಾ ಶೀರ್ಷಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...