alex Certify
ಕನ್ನಡ ದುನಿಯಾ       Mobile App
       

Kannada Duniya

ಪ. ಬಂಗಾಳ ಸರ್ಕಾರದ ಯಡವಟ್ಟು ಬಿಚ್ಚಿಟ್ಟ ನಟ

ಪಶ್ಚಿಮ ಬಂಗಾಳ ಪಠ್ಯದಲ್ಲಿ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಕಾ ಸಿಂಗ್ ರ ಜೀವನ ಕಥೆಯನ್ನು ಅಳವಡಿಸಲಾಗಿದೆ. ಪುಸ್ತಕದಲ್ಲಿ ಲೋಪ ಎದ್ದು ಕಾಣುತ್ತಿದ್ದು, ನಟ ಫರಾನ್ ಅಕ್ತರ್ ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಫರಾನ್ ಅಕ್ತರ್, ಮಿಲ್ಕಾ ಸಿಂಗ್ ರ ಜೀವನ ಆಧಾರಿತ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಮಿಲ್ಕಾ ಸಿಂಗ್ ಎದುರಿಸಿದ ಸವಾಲು, ನಡೆದ ಬಂದ ದಾರಿಯನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿತ್ತು. 2013ರಲ್ಲಿ ತೆರೆ ಕಂಡ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಪಶ್ಚಿಮ ಬಂಗಾಳ ಸರ್ಕಾರ ತಮ್ಮ ಪಠ್ಯದಲ್ಲಿ ಮಿಲ್ಕಾ ಸಿಂಗ್ ಫೋಟೋ ಹಾಕುವ ಬದಲಿಗೆ, ಫರಾನ್ ಅಕ್ತರ್ ಫೋಟೋ ಹಾಕಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಫರಾನ್ ಈ ಫೋಟೋ ಅಪ್ ಲೋಡ್ ಮಾಡ್ತಾ ಇದ್ದಂತೆ, ಎಚ್ಚೆತ್ತ ಸರ್ಕಾರ ಈ ಫೋಟೋ ಸ್ಥಳದಲ್ಲಿ ಪದಕಗಳನ್ನು ಹಾಕಿದೆ. ಫರಾನ್ ಮಾಡಿದ ಟ್ವೀಟ್ ಸಖತ್ ವೈರಲ್ ಆಗಿದೆ. ಫರಾನ್ ಮಾಡಿದ ಟ್ವೀಟ್ ಗೆ 1700 ಲೈಕ್ ಹಾಗೂ 400 ರೀ-ಟ್ವೀಟ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...