alex Certify
ಕನ್ನಡ ದುನಿಯಾ       Mobile App
       

Kannada Duniya

ಹಣದ ವಿಚಾರಕ್ಕೆ ಕಿತ್ತಾಡಿಕೊಂಡಿದ್ರು ಕರಣ್ – ಕರೀನಾ

kareena

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರ ಆತ್ಮಚರಿತ್ರೆ ‘ದಿ ಅನ್ ಸೂಟೇಬಲ್ ಬಾಯ್’ ಸಾಕಷ್ಟು ಸುದ್ದಿಮಾಡಿದೆ. ಕರಣ್ ಜೋಹರ್ ಅವರ ಪ್ರಾಮಾಣಿಕ ವಿವಾದಾತ್ಮಕ ತಪ್ಪೊಪ್ಪಿಗೆಗಳು ಜನರಲ್ಲಿ ಕುತೂಹಲ ಹುಟ್ಟಿಸಿವೆ. ಆತ್ಮೀಯರಾಗಿದ್ದ ಶಾರುಖ್ ಖಾನ್ ಮತ್ತು ಕಾಜೋಲ್ ಜೊತೆಗೆ ಮಾತ್ರವಲ್ಲದೆ ಕರೀನಾ ಕಪೂರ್ ಹಾಗೂ ಕರಣ್ ಜೋಹರ್ ನಡುವೆ ನಡೆದ ಕಿತ್ತಾಟದ ಬಗ್ಗೆ ಕೂಡ ಆತ್ಮಚರಿತ್ರೆಯಲ್ಲಿ ಬರೆಯಲಾಗಿದೆ.

‘ಕಲ್ ಹೋ ನಾ ಹೋ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವಂತೆ ಕರಣ್, ಕರೀನಾ ಬಳಿ ಮನವಿ ಮಾಡಿದ್ದರು. ಆದ್ರೆ ಶಾರುಖ್ ಗೆ ಕೊಟ್ಟಷ್ಟೇ ಸಂಭಾವನೆ ಬೇಕು ಅಂತಾ ಕರೀನಾ ಪಟ್ಟು ಹಿಡಿದರಂತೆ, ಹಾಗಾಗಿ ಕರೀನಾ ಬದಲು ಕರಣ್ ಪ್ರೀತಿ ಝಿಂಟಾರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದರು. ಇದೇ ವಿಚಾರಕ್ಕೆ ಕರಣ್ ಜೋಹರ್ ಹಾಗೂ ಬೇಬೋ ಒಂದು ವರ್ಷ ಪರಸ್ಪರ ಮಾತನಾಡಿಕೊಂಡಿರಲಿಲ್ಲ.

ಪಾರ್ಟಿಯಲ್ಲಿ ಎದರುಬದುರಾದ್ರೂ ಮಾತನಾಡಿಸ್ತಾ ಇರಲಿಲ್ಲ ಅಂತಾ ಕರಣ್ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ನಂತರ ‘ಕಲ್ ಹೋ ನಾ ಹೋ’ ಚಿತ್ರದ ಬಿಡುಗಡೆ ಸಮಯದಲ್ಲಿ ಖುದ್ದು ಕರೀನಾ ಕರಣ್ ಗೆ ಕರೆ ಮಾಡಿದ್ದರಂತೆ. ಆ ಸಮಯದಲ್ಲಿ ಯಶ್ ಜೋಹರ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು, ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಕರಣ್ ಗೆ ಫೋನ್ ಕಾಲ್ ಮಾಡಿದ್ದ ಕರೀನಾ ಕ್ಷಮೆ ಕೇಳಿದ್ದರಂತೆ, ಯಶ್ ಜೋಹರ್ ಆರೋಗ್ಯ ವಿಚಾರಿಸಿದ್ದಲ್ಲದೆ ಭಾವೋದ್ವೇಗಕ್ಕೊಳಗಾಗಿದ್ದರು ಅಂತಾ ಪುಸ್ತಕದಲ್ಲಿ ಕರಣ್ ವಿವರಿಸಿದ್ದಾರೆ. ಹೀಗೆ ಸಾಕಷ್ಟು ಸ್ವಾರಸ್ಯಕರ ವಿಚಾರಗಳು ಕರಣ್ ಆತ್ಮಚರಿತ್ರೆಯಲ್ಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...