alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ನಟ ಕಾಲು ಮುರಿದುಕೊಂಡಿರೋ ವಿಡಿಯೋ

2017ರ ಆಗಸ್ಟ್ ನಲ್ಲಿ Mission Impossible – Fallout ನ ಆ್ಯಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟ ಟಾಮ್ ಕ್ರೂಸ್ ಅವರ ಪಾದದ ಕೀಲು ಮುರಿದು ಹೋಗಿತ್ತು. ಹಾಗಾಗಿ ಶೂಟಿಂಗ್ ಅನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ‘ದಿ ಗ್ರಹಾಂ ನಾರ್ಟನ್ ಶೋ’ನಲ್ಲಿ ಟಾಮ್ ಕ್ರೂಸ್ ಆ ದುರ್ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

 

ಅಷ್ಟೇ ಅಲ್ಲ ಆ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಟಾಮ್ ಕ್ರೂಸ್ ಜೊತೆಗೆ MI 6 ನ ಸಹನಟರಾದ ಹೆನ್ರಿ ಕೇವಿಲ್, ರೆಬೆಕ್ಕಾ ಫರ್ಗ್ಯುಸನ್ ಮತ್ತು ಸಿಮೊನ್ ಪೆಗ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ರು. ಟಾಮ್ ಕ್ರೂಸ್ ಕಟ್ಟಡದ ಮೇಲಿಂದ ಹಾರಿ ಗೋಡೆಗೆ ಡಿಕ್ಕಿ ಹೊಡೆದಿರೋ ದೃಶ್ಯ ಈ ವಿಡಿಯೋದಲ್ಲಿದೆ.

ಆ ಸೀನ್ ನಲ್ಲಿ ಕೂಡ ಟಾಮ್ ಕ್ರೂಸ್ ಗೋಡೆಗೆ ಡಿಕ್ಕಿ ಹೊಡೆಯಬೇಕಿತ್ತು. ಆದ್ರೆ ಅದರ ಪರಿಣಾಮ ಮಾತ್ರ ನಮ್ಮ ಊಹೆಯನ್ನೂ ಮೀರಿದ್ದಾಗಿದೆ ಅಂತಾ ಟಾಮ್ ಕ್ರೂಸ್ ಹೇಳಿದ್ದಾರೆ. ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆಯುತ್ತಿದ್ದಂತೆ ಅವರ ಆ್ಯಂಕಲ್ ಲಟಕ್ಕನೆ ಮುರಿದಿದೆ. ಈವರೆಗೆ ಆ ನೋವು ಸಂಪೂರ್ಣ ವಾಸಿಯಾಗಿಲ್ಲ ಅಂತಾ ಟಾಮ್ ಕ್ರೂಸ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...