alex Certify
ಕನ್ನಡ ದುನಿಯಾ       Mobile App
       

Kannada Duniya

ಮುಚ್ಚಿಡಲು ಯತ್ನಿಸಿದ್ರೂ ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಪ್ರಿಯಾಂಕಾಳ ಈ ಗುಟ್ಟು…!

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಈಗ ಮುಚ್ಚಿಟ್ಟ ವಿಚಾರವೇನು ಅಲ್ಲ. ಪಿಗ್ಗಿ ಮತ್ತು ನಿಕ್ ಬಾಯಿಬಿಟ್ಟು ತಾವಿಬ್ಬರು ಪ್ರೀತಿಸ್ತಿದ್ದೀವಿ ಅಂತ ಹೇಳದೆ ಇದ್ದರು ಅವರ ನಡೆನುಡಿಗಳಲ್ಲಿ ಇಬ್ಬರ ನಡುವೆ ಪ್ರೀತಿ ಅಮೃತಧಾರೆ ಹರೀತಿದೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಾಗ್ತಿದೆ. ಜುಲೈ 18ರಂದು ನಿಕ್ ಮತ್ತು ಪ್ರಿಯಾಂಕ ಗುಟ್ಟಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆಯಾದ್ರು ಈ ಜೋಡಿ ಮಾತ್ರ ಇಟ್ಸ್ ಅಫಿಶಿಯಲ್ ಅಂತ ಬಾಯ್ಬಿಟ್ಟು ಹೇಳ್ತಿಲ್ಲ.

ಆದ್ರೆ ಪ್ರಿಯಾಂಕ ಚೋಪ್ರಾ ತಮ್ಮ ಎಂಗೇಜ್ಮೆಂಟ್ ವಿಚಾರವನ್ನು ಬಚ್ಚಿಡೋಕೆ ಹೋಗಿ ಅದನ್ನು ಎಲ್ಲರ ಮುಂದೆ ಬಹಿರಂಗ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಕಾರಿನ ಬಳಿ ತೆರಳುವ ವೇಳೆ ತಮ್ಮ ಬೆರಳಿನಲ್ಲಿದ್ದ ಎಂಗೇಜ್ಮೆಂಟ್ ಉಂಗುರವನ್ನು ಯಾರಿಗೂ ಕಾಣದಂತೆ ತೆಗೆದು ಜೇಬಿಗಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ರು.

ಹಾಗಿದ್ದರು ಮಾಧ್ಯಮಗಳ ಕ್ಯಾಮರಾ ಕಣ್ಣುಗಳನ್ನ ಪ್ರಿಯಾಂಕ ಅಷ್ಟು ಸುಲಭವಾಗಿ ಏಮಾರಿಸೋಕೆ ಸಾಧ್ಯವಾಗಲಿಲ್ಲ, ಪ್ರಿಯಾಂಕ ಉಂಗುರ ತೆಗೆಯುವಾಗಿನ ಆ ಆತುರದ ಕ್ಷಣಗಳನ್ನ ಪರ್ಫೆಕ್ಟ್ ಆಗಿ ಸೆರೆಹಿಡಿದವು. ಉಂಗುರು ತೆಗೆದ ಬಗೆಯನ್ನ ಯಾರು ಗಮನಿಸಿಲ್ಲ ಅಂದುಕೊಂಡು ಕಾರು ಏರಿ ಹೊರಟ ಪ್ರಿಯಾಂಕ ಈಗ ವಿಡಿಯೋ ನೋಡಿ ಏನಂದುಕೊಳ್ತಿದ್ದಾರೋ ಏನೋ…?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...