alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ದೀಪಿಕಾಳ ಜಿಮ್ ವರ್ಕೌಟ್ ವಿಡಿಯೋ

IndiaTv73fab1_Deepika-Padukone-Workout

ಬಾಲಿವುಡ್ ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರರಂಗ ಪ್ರವೇಶಿಸಲು ರಂಗ ಸಜ್ಜಾಗಿದೆ. ವಿನ್ ಡಿಸೇಲ್ ಜೊತೆಗೆ ‘ಎಕ್ಸ್ಎಕ್ಸ್ಎಕ್ಸ್’ ಥ್ರಿಲರ್ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.

ಆಕ್ಷನ್ ಚಿತ್ರವಾಗಿರುವ ಕಾರಣ ತಮ್ಮ ದೇಹವನ್ನು ಅದಕ್ಕಾಗಿ ಹುರಿಗೊಳಿಸಿಕೊಳ್ಳುತ್ತಿರುವ ದೀಪಿಕಾ, ಬಾಲಿವುಡ್ ನ ಖ್ಯಾತ ಫಿಟ್ನೆಸ್ ಟ್ರೈನರ್ ಯಾಸ್ಮೀನ್ ಕರಾಚಿವಾಲಾ ಅವರ ಮೊರೆ ಹೋಗಿದ್ದಾರೆ. ಜಿಮ್ ನಲ್ಲಿ ದೀಪಿಕಾ ದೇಹ ದಂಡಿಸುತ್ತಿರುವ ವಿಡಿಯೋವನ್ನು ಯಾಸ್ಮೀನ್ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.

ತಮ್ಮ ಹಾಲಿವುಡ್ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಭರ್ಜರಿ ತಯಾರಿ ನಡೆಸುತ್ತಿರುವ ಕುರಿತು ವೀಕ್ಷಕರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಲಿವುಡ್ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ತಮ್ಮ ಭಾಗದ ಚಿತ್ರೀಕರಣಕ್ಕಾಗಿ ದೀಪಿಕಾ ಫೆಬ್ರವರಿಯಲ್ಲಿ ತೆರಳಲಿದ್ದಾರೆ ಎನ್ನಲಾಗಿದೆ. ದೀಪಿಕಾಳ ಜಿಮ್ ವರ್ಕೌಟ್ ವಿಡಿಯೋ ಕೆಳಗಿದೆ ನೋಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...