alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳಕ್ಕೊಳಗಾಗಿದ್ಲು ಈ ಖ್ಯಾತ ನಟಿ

sonam_kapoorನಟಿ ಸೋನಂ ಕಪೂರ್ ಅವರದ್ದು ಯಾವಾಗ್ಲೂ ನೇರ ಮಾತು. ಮನಸ್ಸಿಗೆ ಬಂದಿದ್ದನ್ನು ಥಟ್ಟಂತ ಹೇಳುವ ಸ್ವಭಾವ. ಭಾವನೆಗಳನ್ನು ಹೊರಗೆಡವಲು ಸೋನಂ ಯಾವತ್ತೂ ಹಿಂಜರಿದಿಲ್ಲ. ಈ ವರ್ಷ ‘ನೀರಜಾ’ ಚಿತ್ರದಲ್ಲಿನ ಅದ್ಭುತ ಅಭಿನಯದಿಂದ ಸೋನಂ ಅಭಿಮಾನಿಗಳ ಮನಗೆದ್ದಿದ್ದಾರೆ.

ಆದ್ರೆ ಈಗ ತಮ್ಮ ಬದುಕಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಅವರೇ ಬಹಿರಂಗಪಡಿಸಿದ್ದಾರೆ. ಚಿಕ್ಕವರಿದ್ದಾಗ ತಮಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಅಂತಾ ಸೋನಂ ಕಪೂರ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಸೋನಂ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಆಘಾತಕಾರಿ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಆದ್ರೆ ಕಿರುಕುಳ ಕೊಟ್ಟವರು ಯಾರು ಅನ್ನೋ ವಿವರವನ್ನೆಲ್ಲ ಹೇಳಿಲ್ಲ. ಖ್ಯಾತ ನಟ ಅನಿಲ್ ಕಪೂರ್ ಪುತ್ರಿ ಕೂಡ ಕಿರುಕುಳ ಅನುಭವಿಸಿದ್ದಳು ಅನ್ನೋ ಸುದ್ದಿ ಅಭಿಮಾನಿಗಳಿಗೆ ಶಾಕ್ ಉಂಟುಮಾಡಿದೆ. ಅಷ್ಟೇ ಅಲ್ಲ ಅದನ್ನು ಮುಜುಗರವಿಲ್ಲದೆ ಸಾರ್ವಜನಿಕವಾಗಿ ಹೇಳಿಕೊಂಡಿರುವ ಸೋನಂ ಕಪೂರ್ ದಿಟ್ಟತನವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...