alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಿಲ್ ಶರ್ಮಾ ಹೊಸ ಶೋಗೂ ಮುನ್ನವೇ ಗ್ರೋವರ್ ಜೊತೆ ಮತ್ತೆ ಜಟಾಪಟಿ

ಕಾಮಿಡಿಯನ್ ಗಳಾದ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಮಧ್ಯೆ ಮತ್ತೆ ಜಟಾಪಟಿ ನಡೆದಿದೆ. ಕಳೆದ ವರ್ಷ ವಿಮಾನದಲ್ಲಿ ಇಬ್ಬರ ಮಧ್ಯೆ ಘರ್ಷಣೆ ನಡೆದಿತ್ತು. ಅದಾದ ಬಳಿಕ ಸುನಿಲ್ ಗ್ರೋವರ್, ಕಪಿಲ್ ಶರ್ಮಾ ಶೋನಿಂದ್ಲೇ ಹೊರಬಿದ್ದಿದ್ದರು.

ಈಗ ಫ್ಯಾಮಿಲಿ ಟೈಮ್ ವಿತ್ ಕಪಿಲ್ ಶರ್ಮಾ ಅನ್ನೋ ಹೊಸ ಶೋ ಶುರುವಾಗ್ತಿದೆ. ಟ್ವಿಟ್ಟರ್ ನಲ್ಲಿ ಕಪಿಲ್ ಹಾಗೂ ಸುನಿಲ್ ಗ್ರೋವರ್ ಮಧ್ಯೆ ಟ್ವೀಟ್ ಸಮರ ಕೂಡ ಮತ್ತೆ ಆರಂಭವಾಗಿದೆ. ವಿಮಾನದಲ್ಲಿ ನಡೆದ ಗಲಾಟೆ ಬಳಿಕ ಶೋಗೆ ವಾಪಸ್ ಬರುವಂತೆ 100 ಬಾರಿ ಕರೆ ಮಾಡಿದ್ದೆ ಅಂತಾ ಕಪಿಲ್ ಹೇಳಿದ್ದಾರೆ.

ಸುನಿಲ್ ಗ್ರೋವರ್ ರನ್ನು ಸುಳ್ಳುಗಾರ ಅಂತಾನೂ ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಗ್ರೋವರ್, ತಾನು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಷ್ಟೆ. ಕಪಿಲ್ ಆರೋಗ್ಯದ ಬಗ್ಗೆ ನನಗೆ ಚಿಂತೆಯಾಗ್ತಿದೆ, ಆತನ ಮಾತುಗಳಿಂದ ನೋವಾಗಿಲ್ಲ ಎಂದಿದ್ದಾರೆ.

ತಾವು ಕಪಿಲ್ ರನ್ನು ಟಾರ್ಗೆಟ್ ಮಾಡ್ತಿಲ್ಲ, ವಿಮಾನದಲ್ಲಿ ನಡೆದ ಜಟಾಪಟಿ ಬಳಿಕ ಕಪಿಲ್ ಶರ್ಮಾ ಶೋಗೆ ವಾಪಸ್ಸಾಗಲು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ ಅಷ್ಟೆ ಎಂದಿದ್ದಾರೆ. ಕಪಿಲ್ ತಮಗೆ ಕರೆ ಮಾಡಿದ್ದು ನಿಜ, ಸಂಧಾನಕ್ಕಾಗಿ ಇಬ್ಬರನ್ನು ಮನೆಗೇ ಕಳುಹಿಸಿದ್ದರು ಅಂತಾ ಒಪ್ಪಿಕೊಂಡಿದ್ದಾರೆ.

 

 

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...