alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ಗಾಗಿ 500 ಟಿಕೆಟ್ ಬುಕ್ ಮಾಡಿದ ಡಿ.ಸಿ.

dc-amra

ವಾರಂಗಲ್: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಅಧ್ಭುತ ದೃಶ್ಯಕಾವ್ಯ ‘ಬಾಹುಬಲಿ -2’ ಚಿತ್ರ ನಾಳೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.

ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ‘ಬಾಹುಬಲಿ -2’ ತೆರೆ ಕಾಣುತ್ತಿದೆ. ಭಾರೀ ಹೈಪ್ ಕ್ರಿಯೇಟ್ ಮಾಡಿರುವ ಈ ಚಿತ್ರವನ್ನು ನೋಡಲು ಜನ ಕುತೂಹಲ ಹೊಂದಿದ್ದು, ಈಗಾಗಲೇ ಟಿಕೆಟ್ ಬುಕ್ ಮಾಡಿ ಕಾಯುತ್ತಿದ್ದಾರೆ.

ವಾರಂಗಲ್ ಜಿಲ್ಲಾಧಿಕಾರಿ ಆಮ್ರಪಾಲಿ ಕೂಡ ಫಸ್ಟ್ ಡೇ, ಫಸ್ಟ್ ಶೋನ 500 ಟಿಕೆಟ್ ಬುಕ್ ಮಾಡಿದ್ದಾರೆ. ಖಡಕ್ ಆಫೀಸರ್ ಆಗಿರುವ ಆಮ್ರಪಾಲಿ ಗಮನಾರ್ಹ ಕೆಲಸ ಮಾಡಿದ ಕೆಳಹಂತದ ಅಧಿಕಾರಿಗಳು, ಸಿಬ್ಬಂದಿಗೆ ಸಿನಿಮಾ ಟಿಕೆಟ್ ಕೊಡುಗೆಯಾಗಿ ನೀಡಿದ್ದಾರೆ.

ಆಮ್ರಪಾಲಿ ಕೈಗೊಂಡಿದ್ದ ಯೋಜನೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಥ್ ನೀಡಿದ್ದು, ಯೋಜನೆ ಯಶಸ್ವಿಯಾಗಿದೆ. ಇದಕ್ಕೆ ಕಾರಣರಾದವರಿಗೆ ‘ಬಾಹುಬಲಿ -2’ ಚಿತ್ರದ ಟಿಕೆಟ್ ಕೊಡಲಾಗಿದೆ. ಏಪ್ರಿಲ್ 28 ರಂದು ವಾರಂಗಲ್ ಹನುಮಕೊಂಡದ ಏಷಿಯನ್ ಹಾಲ್ ನಲ್ಲಿ ನೌಕರರು ಸಿನಿಮಾ ನೋಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...