alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯಕ್ಕೆ ಕಾಲಿಟ್ಟ ಕಾರಣವನ್ನು ಬಿಚ್ಚಿಟ್ಟ ಸೂಪರ್ ಸ್ಟಾರ್ ರಜನಿ

ಕಳೆದ ವರ್ಷದ ಡಿಸೆಂಬರ್ 31 ರಂದು ತಮ್ಮ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದ್ದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅದಕ್ಕೂ ಮುನ್ನ ತಮಿಳುನಾಡಿನ ತಮ್ಮ ಅಭಿಮಾನಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು.

ಇದೀಗ ರಜನಿ ತಮ್ಮ ರಾಜಕೀಯ ಪ್ರವೇಶದ ಕಾರಣವನ್ನು ಸಭೆಯೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಚೆನ್ನೈನ ಖಾಸಗಿ ಮೆಡಿಕಲ್ ಕಾಲೇಜೊಂದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಬಳಿಕ ಭಾರೀ ಜನಸ್ತೋಮದ ನಡುವೆ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದಾರೆ.

ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್, ಜಯಲಲಿತಾ ಬಹು ದೊಡ್ಡ ನಾಯಕರು. ಆದರೆ ಅವರಿಬ್ಬರು ಇಂದು ನಮ್ಮ ನಡುವೆ ಇಲ್ಲ. ಮತ್ತೊಬ್ಬ ಪ್ರಭಾವಿ ನಾಯಕ ಕರುಣಾನಿಧಿಯವರು ಅನಾರೋಗ್ಯದ ಕಾರಣ ರಾಜ್ಯವನ್ನು ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆ ಕೊರತೆಯನ್ನು ತುಂಬಲು ತಾವು ರಾಜಕೀಯ ಪ್ರವೇಶಿಸಿದ್ದು, ಎಂ.ಜಿ. ರಾಮಚಂದ್ರನ್ ಅವರ ಮಾದರಿಯಲ್ಲೇ ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದಾರೆ.

ಚಿತ್ರರಂಗದವರ ರಾಜಕೀಯ ಪ್ರವೇಶದ ಕುರಿತು ಕೆಲವರು ಅಪಸ್ವರ ಎತ್ತುತ್ತಿರುವುದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ರಜನಿಕಾಂತ್, ಅಂತವರುಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದು ತಿರುಗೇಟು ನೀಡಿದ್ದಾರೆ. ತಾವು ಎಂ.ಜಿ.ಆರ್. ಆಗಲು ಸಾಧ್ಯವಿಲ್ಲ ನಿಜ. ಆದರೆ ಅವರಂತೆ ಖಂಡಿತವಾಗಿಯೂ ಉತ್ತಮ ಆಡಳಿತ ನೀಡುತ್ತೇನೆಂಬ ಭರವಸೆಯಿದೆ ಎಂದಿದ್ದಾರೆ ರಜನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...