alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಚಿತ್ರದಲ್ಲಿ ದ್ವಿಪಾತ್ರ ಮಾಡ್ತಿದ್ದಾರೆ ಶ್ರದ್ಧಾ..!

ನಟ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಸಾಹೋ ಸದ್ಯ ಬಹು ಚರ್ಚಿತ ಚಿತ್ರ. ಸೆಟ್ಟೇರುವ ಮುನ್ನವೇ ಸಾಹೋ ಭಾರೀ ಸುದ್ದಿ ಮಾಡಿತ್ತು. ಸಿನೆಮಾಕ್ಕೆ ನಾಯಕಿಯ ಆಯ್ಕೆ ಕೂಡ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಶ್ರದ್ಧಾ ಕಪೂರ್ ಪ್ರಭಾಸ್ ಗೆ ಜೋಡಿಯಾಗ್ತಿರೋದಂತೂ ಪಕ್ಕಾ ಆಗಿದೆ.

ಆದ್ರೆ ಸಾಹೋ ಚಿತ್ರದಲ್ಲಿ ಶ್ರದ್ಧಾ ಕಪೂರ್ ಪಾತ್ರದ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಸಿಕ್ಕಿದೆ. ಈ ಚಿತ್ರದಲ್ಲಿ ಶ್ರದ್ಧಾ ದ್ವಿಪಾತ್ರ ಮಾಡ್ತಿದ್ದಾರಂತೆ. ಒಂದು ಕೋಪಿಷ್ಟೆ ಹಾಗೂ ಸಾಹಸಿ ಯುವತಿಯ ಪಾತ್ರ. ಇನ್ನೊಂದರಲ್ಲಿ ಮುಗ್ಧ, ನಾಚಿಕೆ ಸ್ವಭಾವದ ಹುಡುಗಿಯಾಗಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರಂತೆ.

ಆದ್ರೆ ಶ್ರದ್ಧಾ ಕಪೂರ್ ಡಬಲ್ ರೋಲ್ ಬಗ್ಗೆ ಈವರೆಗೂ ನಿರ್ದೇಶಕರು ತುಟಿಬಿಚ್ಚಿಲ್ಲ. ಈವರೆಗೂ ಶ್ರದ್ಧಾ ಹಾಗೂ ಪ್ರಭಾಸ್ ಮುಖತಃ ಭೇಟಿಯಾಗಿಲ್ಲ. ಆದ್ರೆ ಫೋನ್ ಮೂಲಕ ಸಂಪರ್ಕದಲ್ಲಿದ್ದಾರೆ. ಚಿತ್ರದ ಆ್ಯಕ್ಷನ್ ಸೀನ್ ಗಳಿಗಾಗಿ ಪ್ರಭಾಸ್ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...