alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್ ಜೊತೆ 5 ಚಿತ್ರ ಮಾಡಲಿದ್ದಾರೆ ರಾಜ್ಕುಮಾರ್ ಹಿರಾನಿ…!

ಮುನ್ನಾಭಾಯಿ, 3 ಈಡಿಯಟ್ಸ್, ಪಿಕೆ ಮತ್ತು ಸಂಜು ಚಿತ್ರಗಳನ್ನು ನೀಡಿರುವ ರಾಜ್ಕುಮಾರ್ ಹಿರಾನಿ ಈಗ ಹಿಟ್ ಚಿತ್ರ ನೀಡುವ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ರಾಜ್ಕುಮಾರ್ ಹಿರಾನಿ ಸಂಜು ಚಿತ್ರ 300 ಕೋಟಿ ಗಳಿಕೆಯತ್ತ ಮುನ್ನುಗ್ಗಿದೆ. ಸಂಜು ಯಶಸ್ಸಿನ ನಂತ್ರ ರಣಬೀರ್ ಕಪೂರ್, ರಾಜ್ಕುಮಾರ್ ಹಿರಾನಿ ಜೊತೆ ಇನ್ನೊಂದಿಷ್ಟು ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ರಣಬೀರ್ ಕಪೂರ್, ರಾಜ್ಕುಮಾರ್ ಹಿರಾನಿ, ಅಮೀರ್ ಖಾನ್ ಹಾಗೂ ಸಂಜಯ್ ದತ್ ಜೊತೆ ಎರಡು ಚಿತ್ರ ಮಾಡಿದ್ದಾರೆ. ಆ ಎರಡೂ ಚಿತ್ರ ಹಿಟ್ ಆಗಿದೆ. ರಾಜ್ಕುಮಾರ್ ನನ್ನ ಜೊತೆ ಇನ್ನೊಂದು ಚಿತ್ರವನ್ನು ಯಾವಾಗ ಮಾಡ್ತಾರೆ ಎಂದು ನಾನು ಕಾಯ್ತಿದ್ದೇನೆಂದು ರಣಬೀರ್ ಹೇಳಿದ್ದಾರೆ.

ನನ್ನ ಜೊತೆ ಎಷ್ಟು ಚಿತ್ರ ಮಾಡ್ತಿರಾ ಎಂದು ರಣಬೀರ್, ರಾಜ್ಕುಮಾರ್ ಹಿರಾನಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಗುತ್ತ ಉತ್ತರ ನೀಡಿದ ರಾಜ್ಕುಮಾರ್ ಹಿರಾನಿ ಐದು ಚಿತ್ರಗಳನ್ನು ಮಾಡ್ತೇನೆ ಎಂದಿದ್ದಾರೆ. ರಾಜ್ಕುಮಾರ್ ಹಿರಾನಿ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡ್ತಿದೆ. ಅದ್ರಲ್ಲೂ ರಣಬೀರ್ ಬಣ್ಣ ಹಚ್ಚುತ್ತಾರಾ ಎಂಬುದನ್ನು ಕೂಡ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...