alex Certify
ಕನ್ನಡ ದುನಿಯಾ       Mobile App
       

Kannada Duniya

ವಿವೇಕ್ ಒಬೆರಾಯ್‌ರಿಂದ ಬಾಲಾಕೋಟ್ ಏರ್‌ಸ್ಟ್ರೈಕ್‌ ಕುರಿತ ಚಿತ್ರ ನಿರ್ಮಾಣ

ಬಾಲಿವುಡ್ ನಟ ವಿವೇಕ್ ಒಬೆರಾಯ್ ಇದೀಗ ಬಾಲಾಕೋಟ್ ಏರ್‌ಸ್ಟ್ರೈಕ್ ಕುರಿತಾದ ಸಿನಿಮಾ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ.

ಫೆಬ್ರವರಿ 14ರಂದು ಭಾರತೀಯ ವಾಯುಸೇನೆ, ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ಏರ್‌ಸ್ಟ್ರೈಕ್‌ನ ನೈಜ ಕಥೆ ಆಧಾರಿತ ಚಿತ್ರ ನಿರ್ಮಿಸುವುದಾಗಿ ವಿವೇಕ್ ಘೋಷಿಸಿದ್ದಾರೆ. ಇದರಲ್ಲಿ ಶತ್ರು ರಾಷ್ಟ್ರದಿಂದ ವಾಪಸಾದ ವಿಂಗ್ ಕಮಾಂಡರ್ ಅಭಿನಂದನ್ ಕುರಿತಾಗಿಯೂ ಇರಲಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ದೇಶಕ್ಕಾಗಿ ಹೋರಾಡಿದ ವೀರ ಯೋಧರ ಬಗ್ಗೆ ಜನರಿಗೆ ಚಿತ್ರದ ಮೂಲಕ ತೋರಿಸಬೇಕಿದೆ‌. ಆದ್ದರಿಂದ ಈ ಚಿತ್ರ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೆ ಚಿತ್ರದ ಬಜೆಟ್ ಹಾಗೂ ನಿರ್ದೇಶಕರ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಇಡೀ ಚಿತ್ರದ ಚಿತ್ರೀಕರಣ ದೆಹಲಿ, ಆಗ್ರಾ, ಜಮ್ಮು‌ಕಾಶ್ಮೀರದಲ್ಲಿ ನಡೆಯಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...