alex Certify
ಕನ್ನಡ ದುನಿಯಾ       Mobile App
       

Kannada Duniya

ನಿಜವಾಯ್ತು ವಿವೇಕ್ ಒಬೆರಾಯ್ ಕುರಿತ ಈ ಸುದ್ದಿ

ಬಾಲಿವುಡ್ ನಟ ವಿವೇಕ್ ಒಬೆರಾಯ್ ಸ್ಯಾಂಡಲ್ ವುಡ್ ನಲ್ಲಿ ನಟಿಸೋದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ರುಸ್ತುಂ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಓಡಾಡ್ತಿತ್ತು. ಈಗ ಆ ಸುದ್ದಿ ನಿಜವಾಗಿದೆ. ರುಸ್ತು ಸಿನಿಮಾದ ಸೆಟ್ ನಲ್ಲಿ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ.

ತಮಿಳಿನ ವಿವೇಗಂ ಚಿತ್ರದ ನಂತರದಲ್ಲಿ ಅವರು ಮತ್ತೊಮ್ಮೆ ಸೌತ್ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ. ಆಗಸ್ಟ್ 15ರವರೆಗೂ ವಿವೇಕ್ ಒಬೆರಾಯ್ ಅಭಿನಯದ ದೃಶ್ಯಗಳ ಚಿತ್ರೀಕರಣ ಮುಂದುವರೆಯಲಿದೆಯಂತೆ. ಚಿತ್ರಕ್ಕಾಗಿ ವಿವೇಕ್ ಸ್ವಲ್ಪ ಮಟ್ಟಿಗೆ ಕನ್ನಡವನ್ನೂ ಕಲಿತಿದ್ದಾರಂತೆ.

ಶ್ರದ್ಧಾ ಶ್ರೀನಾಥ್, ಶಿವಣ್ಣನಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಮಯೂರಿ ಶಿವಣ್ಣನ ತಂಗಿಯ ಪಾತ್ರವನ್ನ ಪ್ಲೇ ಮಾಡ್ತಿದ್ದಾರೆ. ಸಾಹಸ ನಿದೇಶಕ ರವಿವರ್ಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...