alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರೋ ವಿಶ್ವರೂಪಂ-2 ಟ್ರೈಲರ್ ನಲ್ಲಿ ಅಂತದ್ದೇನಿದೆ?

ಹಿರಿಯ ನಟ ಕಮಲ್ ಹಾಸನ್ ಅಭಿನಯದ ವಿಶ್ವರೂಪಂ-2 ಚಿತ್ರದ ಟ್ರೈಲರ್ ಜೂನ್ 11ರಂದೇ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಯಾಗ್ತಿದ್ದಂತೆ ಯುಟ್ಯೂಬ್ ನಲ್ಲಿ ವೈರಲ್ ಆಗಿತ್ತು. ಕೇವಲ ಎರಡೇ ದಿನಗಳಲ್ಲಿ ಟ್ರೈಲರನ್ನು 1 ಮಿಲಿಯನ್ ಗೂ ಹೆಚ್ಚು ಬಾರಿ ನೋಡಲಾಗಿದೆ.

2013 ರಲ್ಲಿ ವಿಶ್ವರೂಪಂ ಚಿತ್ರ ಬಿಡುಗಡೆಯಾಗಿತ್ತು. ವಿಶ್ವರೂಪಂ-2 ಟ್ರೈಲರ್ ನಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿವೆ. ಚಿತ್ರದ ದೃಶ್ಯಗಳನ್ನು ಟ್ರೈಲರ್ ಗೆ ಅದ್ಭುತವಾಗಿ ಜೋಡಿಸಲಾಗಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ಒಂದು ನಿಮಿಷ 47 ಸೆಕೆಂಡ್ ನ ಈ ಟ್ರೈಲರ್ ನೋಡಿದವರು ಸಲ್ಮಾನ್, ಜಾನ್ ಆಕ್ಷನ್ ಮರೆತು ಬಿಡ್ತಾರೆ. ಅಷ್ಟು ಅದ್ಭುತ ಆಕ್ಷನ್ ಟ್ರೈಲರ್ ನಲ್ಲಿದೆ.

ಚಿತ್ರ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರೀಕರಣಗೊಳ್ತಿದೆ. ತೆಲುಗು ಭಾಷೆಗೆ ಚಿತ್ರ ಡಬ್ ಆಗಲಿದೆ. ಹಿಂದಿ ಟ್ರೈಲರನ್ನು ಬುಧವಾರ ಅಮೀರ್ ಖಾನ್ ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿದ್ದಾರೆ. ಚಿತ್ರ ಆಗಸ್ಟ್ 10ರಂದು ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...