alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್-ಅನುಷ್ಕಾ ಮದುವೆ ದಿನ ಕಾಡಿತ್ತು ಇಂಥಾ ಆತಂಕ….

2017ರ ಬೆಸ್ಟ್ ಮದುವೆ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರದ್ದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಜೋಡಿಯಂತೂ ಪಿಕ್ಚರ್ ಪರ್ಫೆಕ್ಟ್ ಆಗಿತ್ತು. ಮದುವೆ ಮನೆಯ ಅಲಂಕಾರ, ವಧು ವರರ ಅಲಂಕಾರ ಯಾವುದರಲ್ಲೂ ಕೊರತೆ ಕಾಣಲಿಲ್ಲ.

ಪ್ರತಿ ಫೋಟೋದಲ್ಲೂ ಕೈಕೈ ಹಿಡಿದಿದ್ದ ನವದಂಪತಿ ಸುಂದರವಾಗಿ ಕಂಗೊಳಿಸಿದ್ದಾರೆ. ಜೀವನದುದ್ದಕ್ಕೂ ಜೊತೆಯಾಗಿ ಸಾಗುತ್ತೇವೆ ಅಂತಾ ಪ್ರಾಮಿಸ್ ಮಾಡಿರೋ ಈ ಜೋಡಿಗೆ ಎಲ್ಲರೂ ಪ್ರೀತಿಯಿಂದ ಹರಸಿ ಹಾರೈಸಿದ್ದಾರೆ.

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಈ ರೊಮ್ಯಾಂಟಿಕ್ ವೆಡ್ಡಿಂಗ್ ಗೆ ಮಾಡಿದ್ದ ಸಿದ್ಧತೆ. ಪ್ರಶಸ್ತಿ ವಿಜೇತ ವೆಡ್ಡಿಂಗ್ ಡಿಸೈನರ್ ದೇವಿಕಾ ನರೈನ್ ಈ ಮದುವೆಯ ಅಲಂಕಾರದ ಹೊಣೆ ಹೊತ್ತುಕೊಂಡಿದ್ರು. ಸವಾಲಿನ ಕೆಲಸ ಅಂದ್ರೆ ಎಲ್ಲವನ್ನೂ ಸೀಕ್ರೆಟ್ ಆಗಿಯೇ ಮಾಡಬೇಕಿತ್ತು.

ಮದುವೆಯ ಅಲಂಕಾರ ಹೇಗಿರಬೇಕು ಅನ್ನೋ ಬಗ್ಗೆ ಅನುಷ್ಕಾ ಕೂಡ ಸಾಕಷ್ಟು ಐಡಿಯಾ ಕೊಟ್ಟಿದ್ದರಂತೆ. ವೆಡ್ಡಿಂಗ್ ಥೀಮ್ ಗೆ ಕೂಡ ವಿಶೇಷ ಅರ್ಥವಿರಬೇಕು ಅನ್ನೋದು ವಿರಾಟ್ ಹಾಗೂ ಅನುಷ್ಕಾ ಆಸೆಯಾಗಿತ್ತು. ಅವರ ನಿರೀಕ್ಷೆಗೆ ತಕ್ಕಂತೆ ದೇವಿಕಾ ಎಲ್ಲಾ ಸಿದ್ದತೆಯನ್ನೂ ಮಾಡಿದ್ರು.

ಆದ್ರೆ ಇಟಲಿಯ ಹವಾಮಾನ ಎಲ್ಲವನ್ನೂ ಹಾಳುಮಾಡುವ ಆತಂಕ ಎದುರಾಗಿತ್ತು. ಚಳಿಗಾಲದಲ್ಲಿ ಸಾಮಾನ್ಯವಾಗಿ ಯಾರೂ ಇಟಲಿಯಲ್ಲಿ ಮದುವೆ ಸಮಾರಂಭ ಹಮ್ಮಿಕೊಳ್ಳುವುದಿಲ್ಲ. ಡಿಸೆಂಬರ್ 11ರಂದು ಕೊಹ್ಲಿ-ಅನುಷ್ಕಾ ಮದುವೆ ದಿನ ಇಟಲಿಯ ವಾತಾವರಣವೇ ಬದಲಾಗಿತ್ತು.

ಭಾರೀ ಹಿಮಪಾತವಾಗಿತ್ತು. ಇಟಲಿ ಮಂಜನ್ನೇ ಹೊದ್ದು ಮಲಗಿಬಿಟ್ಟಿತ್ತು. ಹಾಗಾಗಿ ಹೊರಗೆ ವಿಶಾಲವಾದ ಜಾಗದಲ್ಲಿ ನಡೆಯಬೇಕಿದ್ದ ಮದುವೆಯನ್ನು ರೆಸಾರ್ಟ್ ಒಳಗೆ ಶಿಫ್ಟ್ ಮಾಡಬೇಕಾಯ್ತು. ಆದ್ರೂ ತಯಾರಿಯಲ್ಲಿ ಯಾವುದೇ ಕೊರತೆ ಕಾಣಲಿಲ್ಲ. ಮದುವೆ ಫೋಟೋಗಳೇ ಅದಕ್ಕೆ ಸಾಕ್ಷಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...