alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಜೊತೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನವೆಂಬರ್ 5ರಂದು ಕೊಹ್ಲಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಆಟಗಾರರು ಸೇರಿದಂತೆ ಕೊಹ್ಲಿ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಮದುವೆ ನಂತ್ರ ಮೊದಲ ಹುಟ್ಟು ಹಬ್ಬ ಆಚರಿಸಿಕೊಳ್ತಿರುವ ಕೊಹ್ಲಿ, ಪತ್ನಿ ಜೊತೆ ಹರಿದ್ವಾರಕ್ಕೆ ತೆರಳಿದ್ದಾರೆ.

ಶನಿವಾರ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿರುಷ್ಕಾ ಅಲ್ಲಿಯ ಹೊಟೇಲ್ ಒಂದರಲ್ಲಿ ತಂಗಿದ್ದಾರೆ. ನವೆಂಬರ್ 7ರವರೆಗೆ ಇಲ್ಲಿಯೇ ಇರಲಿರುವ ಜೋಡಿ, ಹುಟ್ಟುಹಬ್ಬದ ಜೊತೆ ದೀಪಾವಳಿಯನ್ನೂ ಇಲ್ಲಿಯೇ ಆಚರಿಸಲಿದ್ದಾರೆ. ಮಾಹಿತಿ ಪ್ರಕಾರ ವಿರುಷ್ಕಾ, ರಿವರ್ ರಾಫ್ಟಿಂಗ್ ನಂತಹ ಸಾಹಸ ಚಟುವಟಿಕೆಯನ್ನು ಎಂಜಾಯ್ ಮಾಡಲಿದ್ದಾರಂತೆ.

ಇಂದು ಕೊಹ್ಲಿ-ಅನುಷ್ಕಾ ಅನಂತ ಧಾಮ್ ಆತ್ಮಬೋಧ್ ಆಶ್ರಮಕ್ಕೆ ತೆರಳುವ ಸಾಧ್ಯತೆಯಿದೆ. ಮಹಾರಾಜ್ ಅನಂತ್ ಬಾಬಾ ಆಶ್ರಮ ಇದಾಗಿದ್ದು, ಅನುಷ್ಕಾ ಶರ್ಮಾ ಕುಟುಂಬಸ್ಥರ ಆಧ್ಯಾತ್ಮಿಕ ಗುರುವಾಗಿದ್ದಾರೆ ಅನಂತ್ ಬಾಬಾ. ಇದೇ ಕಾರಣಕ್ಕಾಗಿ ಆಶ್ರಮದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಹಿಂದಿನ ವರ್ಷ ಅನುಷ್ಕಾ ಹಾಗೂ ಟೀಂ ಇಂಡಿಯಾ ಜೊತೆ ಕೊಹ್ಲಿ ರಾಜ್ಕೋಟ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ-20 ಪಂದ್ಯದಿಂದ ಹೊರಗಿರುವ ಕೊಹ್ಲಿ, ಪತ್ನಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...