alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಮಿಲಿ ಫ್ಲಾನ್ ಬಗ್ಗೆ ಕೊಹ್ಲಿ ಹೇಳಿದ್ದೇನು?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ನಂತ್ರವೂ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ಅನುಷ್ಕಾರನ್ನು ಆಫ್ ಫೀಲ್ಡ್ ಕ್ಯಾಪ್ಟನ್ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೊಹ್ಲಿ, ಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರ್ತಿದ್ದಂತೆ ಸಾಕಷ್ಟು ಸಕಾರಾತ್ಮಕ ಬದಲಾವಣೆಯಾಗಿದೆ ಎಂದಿದ್ದರು.

ಇದೇ ಮೊದಲ ಬಾರಿ ಕುಟುಂಬ ಯೋಜನೆ ಬಗ್ಗೆಯೂ ಕೊಹ್ಲಿ ಮಾತನಾಡಿದ್ದಾರೆ. ತಂದೆಯಾಗುವ ಮುನ್ನ ವಿರಾಟ್ ಕೊಹ್ಲಿ ಮನಸ್ಸಿನಲ್ಲಿರುವ ಆತಂಕವೇನೂ ಹಾಗೂ ತಂದೆಯಾದ ಮೇಲೆ ಮನೆಯಲ್ಲಿರುವ ಯಾವ ವಸ್ತುವನ್ನು ಹೊರಗೆ ಹಾಕಲು ಇಷ್ಟಪಡ್ತೇನೆ ಎಂಬುದನ್ನು ಕೊಹ್ಲಿ ಹೇಳಿದ್ದಾರೆ.

ಅನುಷ್ಕಾ ಶರ್ಮಾ ಧಾರ್ಮಿಕವಾಗಿದ್ದಾರೆ. ಅವ್ಳ ಜೊತೆಗಿದ್ದು ನನ್ನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ನಾನು ಮೊದಲಿಗಿಂತ ತುಂಬಾ ಶಾಂತವಾಗಿದ್ದೇನೆಂದು ಕೊಹ್ಲಿ ಹೇಳಿದ್ದಾರೆ.

ನಾನು ಈಗ ಯಾವ ಸ್ಥಾನದಲ್ಲಿದ್ದೇನೋ ಅದು ಶಾಶ್ವತವಲ್ಲ. ನನ್ನ ಕುಟುಂಬ ಸದಾ ನನ್ನ ಜೊತೆಯಲ್ಲಿರುತ್ತದೆ ಎಂಬುದು ನನಗೆ ಗೊತ್ತು. ನನ್ನ ಮಕ್ಕಳು ದೊಡ್ಡವರಾಗ್ತಿದ್ದಂತೆ ನನ್ನ ಮನೆಯಲ್ಲಿ ನನ್ನ ಸಾಧನೆಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಇಡುವುದಿಲ್ಲ ಎಂದಿದ್ದಾರೆ ಕೊಹ್ಲಿ.

ನಾನು ಗೆದ್ದ ಟ್ರೋಫಿ ಸೇರಿದಂತೆ ವೃತ್ತಿಯ ಯಾವುದೇ ವಸ್ತು ಮನೆಯಲ್ಲಿ ಇರೋದಿಲ್ಲ. ನನ್ನ ಮಕ್ಕಳ ಬೆಳವಣಿಗೆಗೆ ಇದು ಅಡ್ಡಿಯಾಗಬಾರದು ಎಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...