alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಗೇಜ್ಮೆಂಟ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

virat

ಜನವರಿ ಒಂದರಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಉಂಗುರ ಬದಲಾಯಿಸಿಕೊಳ್ತಿದ್ದಾರಂತೆ..! ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿರುವ ವಿಷಯ ಇದು. ಎಂಗೇಜ್ಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಈಗ ಮೌನ ಮುರಿದಿದ್ದಾರೆ.

ನಮ್ಮಿಬ್ಬರ ಎಂಗೇಜ್ಮೆಂಟ್ ಆಗ್ತಾ ಇಲ್ಲ. ಒಂದು ವೇಳೆ ಉಂಗುರ ಬದಲಾಯಿಸಿಕೊಳ್ಳುವುದೇ ಆದಲ್ಲಿ ಅದ್ರಲ್ಲಿ ಮುಚ್ಚಿಡುವ ವಿಷಯವೇನೂ ಇಲ್ಲ ಎಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ. ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಎಂಗೇಜ್ಮೆಂಟ್ ವಿಚಾರಕ್ಕೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಉತ್ತರಖಂಡನ ನರೇಂದ್ರ ನಗರದಲ್ಲಿರುವ ಆನಂದ್ ಹೊಟೇಲ್ ನಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಳ್ಳಲಿದ್ದಾರೆಂದು ಸುದ್ದಿಯಾಗಿತ್ತು. ಕ್ರಿಸ್ಮಸ್ ಹಿಂದಿನ ದಿನವೇ ಉತ್ತರಖಂಡ ತಲುಪಿದ್ದ ಜೋಡಿ ನ್ಯೂ ಇಯರ್ ಆಚರಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ನಟ ಅಮಿತಾಬ್ ಬಚ್ಚನ್ ಕೂಡ ಅಲ್ಲಿಗೆ ಹೋಗಿರುವುದರಿಂದ ಆಪ್ತರು ಹಾಗೂ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಕೊಹ್ಲಿ-ಅನುಷ್ಕಾ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆಂದು ಸುದ್ದಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...