alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಯಶಸ್ಸಿನ ಹಿಂದಿದ್ದಾಳೆ ಈ ಬೆಡಗಿ…!

ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲುಂಡಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ 203 ರನ್ ಗಳಿಂದ ಇಂಗ್ಲೆಂಡ್ ಸೋಲಿಸಿ ಗೆಲುವಿನ ನಗೆ ಬೀರಿದೆ. ಪಂದ್ಯದ ನಂತ್ರ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಯಶಸ್ವಿ ಪ್ರದರ್ಶನಕ್ಕೆ ಕಾರಣ ಯಾರು ಎಂಬುದನ್ನು ಹೇಳಿದ್ದಾರೆ.

ಟೀಂ ಇಂಡಿಯಾ ಜಯವನ್ನು ಕೇರಳ ಜನರಿಗೆ ಅರ್ಪಿಸಿದ ಕೊಹ್ಲಿ, ತಮ್ಮ ಅತ್ಯುತ್ತಮ ಪ್ರದರ್ಶನದ ಕ್ರೆಡಿಟ್ ಪತ್ನಿ ಅನುಷ್ಕಾ ಶರ್ಮಾರಿಗೆ ನೀಡಿದ್ದಾರೆ. ಮೂರನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ 97 ರನ್ ಗಳಿಸಿ ಔಟ್ ಆಗಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ 103 ರನ್ ಗಳಿಸಿ ವೃತ್ತಿ ಜೀವನದ 23ನೇ ಶತಕ ಸಿಡಿಸಿದ್ರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಪತ್ನಿ ಅನುಷ್ಕಾ, ಕೊಹ್ಲಿಯನ್ನು ಪ್ರೋತ್ಸಾಹಿಸುತ್ತಿದ್ದರು.

ಶತಕ ಸಿಡಿಸಿದ ನಂತ್ರ ಅನುಷ್ಕಾಗೆ ಫ್ಲಾಯಿಂಗ್ ಕಿಸ್ ನೀಡಿದ್ದ ಕೊಹ್ಲಿ, ಪಂದ್ಯ ಮುಗಿಯುತ್ತಿದ್ದಂತೆ ಉತ್ತಮ ಪ್ರದರ್ಶನಕ್ಕೆ ಅನುಷ್ಕಾ ಕಾರಣ. ಪ್ರತಿ ಕ್ಷಣವೂ ನನಗೆ ಪ್ರೋತ್ಸಾಹ ತುಂಬುತ್ತಾರೆ. ನನ್ನನ್ನು ಸಕಾರಾತ್ಮಕ ದಾರಿಯಲ್ಲಿ ನಡೆಯಲು ಪ್ರೋತ್ಸಾಹಿಸುತ್ತಾರೆಂದು ಪತ್ನಿಯನ್ನು ಹೊಗಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...