alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಅನುಷ್ಕಾ-ವಿರಾಟ್ ಬ್ರೇಕ್ ಅಪ್ ರಹಸ್ಯ

virat-anushka-13

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಅವರ ನಡುವಿನ ಸಂಬಂಧ ಹಾಳಾಗಲು ಕಾರಣ ಏನೆಂಬುದು ಭಾರೀ ಕುತೂಹಲದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಅನುಷ್ಕಾ ಸಹೋದರ ಕೂಡ ಕ್ರಿಕೆಟ್ ಆಟಗಾರನಾಗಿದ್ದು, ಆತನ ಮೂಲಕ ಕೊಹ್ಲಿಗೆ ಅನುಷ್ಕಾ ಪರಿಚಯವಾಗಿತ್ತು. ಕೊಹ್ಲಿ ಮ್ಯಾಚ್ ಆಡಲು ವಿದೇಶಗಳಿಗೆ ಹೋದಾಗ ಅನುಷ್ಕಾ ಕೂಡ ಹೋಗಿ ಹುರಿದುಂಬಿಸುತ್ತಿದ್ದರು. ಶೂಟಿಂಗ್ ಗೆಂದು ಅನುಷ್ಕಾ ಹೋದ ಕಡೆಗೆ ಕೊಹ್ಲಿಯೂ ಹೋಗಿ ಪ್ರೋತ್ಸಾಹಿಸುತ್ತಿದ್ದರು. ಇವರಿಬ್ಬರ ಅನ್ಯೋನ್ಯತೆ, ಪ್ರೀತಿ ಸುತ್ತಾಟ ಸಖತ್ ಸುದ್ದಿಯಾಗಿತ್ತು. ಆದರೆ, ಶುರುವಾದ ಸ್ಪೀಡ್ ನಲ್ಲೇ, ಅನುಷ್ಕಾ, ಕೊಹ್ಲಿ ಪ್ರೀತಿ ಮುರಿದುಬಿದ್ದಿತ್ತು. ಇಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿಕೊಂಡರು.

ಅವರು ಬೇರೆಯಾಗಿದ್ದಕ್ಕೆ ಕಾರಣ ಮಾತ್ರ ಗೊತ್ತಾಗಿರಲಿಲ್ಲ. ಇವರಿಬ್ಬರು ದೂರವಾಗಲು ಕಾರಣ ದುಡ್ಡು. ಅನುಷ್ಕಾ ಅಭಿನಯದ ‘ಬಾಂಬೆ ವೆಲ್ವೆಟ್’ ಚಿತ್ರಕ್ಕೆ ಕೊಹ್ಲಿ 40 ಕೋಟಿ ರೂ. ಬಂಡವಾಳ ಹೂಡಿದ್ದರೆನ್ನಲಾಗಿದೆ. ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲವಾದ್ದರಿಂದ ಕೊಹ್ಲಿಯ ದುಡ್ಡು ವಾಪಸ್ ಬರಲಿಲ್ಲ.

ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದರಿಂದ ಇಬ್ಬರೂ ದೂರವಾಗಿದ್ದಾರೆ. ಕೊಹ್ಲಿ ಮತ್ತೆ ಅನುಷ್ಕಾ ಪ್ರೀತಿ ಸಂಪಾದಿಸಲು ಆಕೆಯ ಸಹೋದರನ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...