alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನಂತ್ರ ಮೊದಲ ದೀಪಾವಳಿ ಸಂಭ್ರಮದಲ್ಲಿ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮದುವೆ ನಂತ್ರದ ಮೊದಲ ದೀಪಾವಳಿಯನ್ನು ಆಚರಿಸಿದ್ದಾರೆ. ವಿರುಷ್ಕಾ ಮನೆಯನ್ನು ಸುಂದರವಾಗಿ ಅಲಂಕರಿಸಿ, ಸಂಭ್ರಮದ ಹಬ್ಬ ಆಚರಿಸಿದ್ದಾರೆ. ಮೊದಲ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದ ಜೋಡಿ ಸಾಮಾಜಿಕ ಜಾಲತಾಣದ ಮೂಲಕ ಕೋಟ್ಯಾಂತರ ಅಭಿಮಾನಿಗಳಿಗೆ ದೀಪಾವಳಿ ಶುಭ ಕೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿರುಷ್ಕಾ ಎರಡು ಸುಂದರ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಫೋಟೋದಲ್ಲಿ ವಿರುಷ್ಕಾ ಸುಂದರವಾಗಿ ಕಾಣ್ತಿದ್ದಾರೆ. ಟ್ವೀಟರ್ ನಲ್ಲಿ ಫೋಟೋ ಹಾಕಿರುವ ಕೊಹ್ಲಿ ನಮ್ಮ ಮನೆಯ ಕಡೆಯಿಂದ ನಿಮಗೆಲ್ಲ ದೀಪಾವಳಿ ಹಬ್ಬದ ಶುಭಾಶಯ. ಎಲ್ಲರಿಗೂ ಶಾಂತಿ, ಖುಷಿ, ಒಳ್ಳೆ ಆರೋಗ್ಯ ಸಿಗಲಿ. ಭಗವಂತನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಟ್ವಿಟ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಕೂಡ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ ಶುಭ ಕೋರಿದ್ದಾರೆ. ಹಿಂದಿನ ವರ್ಷ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಇದು ಮೊದಲ ದೀಪಾವಳಿ. ಕೆಲ ದಿನಗಳ ಹಿಂದಷ್ಟೆ ಪತ್ನಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಕೊಹ್ಲಿ ಈಗ ದೀಪಾವಳಿ ಸಂಭ್ರಮದಲ್ಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...