alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಲ್ಲಿ ನೀರೂರಿಸುತ್ತೆ ಕೊಹ್ಲಿ-ಅನುಷ್ಕಾ ಮದುವೆ ಭೋಜನ

ಈ ವರ್ಷ ಅತಿ ಹೆಚ್ಚು ಸುದ್ದಿ ಮಾಡಿರೋ ಸೆಲೆಬ್ರಿಟಿ ಮದ್ವೆ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರದ್ದು. ಇಬ್ಬರೂ ಗುಟ್ಟಾಗಿ ಇಟಲಿಯಲ್ಲಿ ಹಸೆಮಣೆ ಏರಿರೋದ್ರಿಂದ ಮದುವೆ ಬಗ್ಗೆ ಎಲ್ಲರಲ್ಲೂ ಸಾಕಷ್ಟು ಕುತೂಹಲ ಇದೆ. ಕುಟುಂಬದವರು ಹಾಗೂ ಅತ್ಯಾಪ್ತರನ್ನು ಬಿಟ್ರೆ ಮದುವೆಯಲ್ಲಿ ಹೆಚ್ಚು ಅತಿಥಿಗಳಿರಲಿಲ್ಲ.

ಮದುವೆ ಮುಗಿದ ಮೇಲೆ ನವ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ ಇಷ್ಟು ಅದ್ಧೂರಿಯಾಗಿ ನಡೆದಿದೆ ಅಂದ್ಮೇಲೆ ಅಲ್ಲಿ ಭೋಜನ ಕೂಡ ಭರ್ಜರಿಯಾಗೇ ಇತ್ತು. ಖ್ಯಾತ ಬಾಣಸಿಗರಾದ ರಿತು ದಾಲ್ಮಿಯಾ ವಿರಾಟ್-ಅನುಷ್ಕಾ ಮದುವೆಯ ಭೋಜನದ ಮೆನು ಡಿಸೈಡ್ ಮಾಡಿದ್ದಾರಂತೆ.

ಅವರ Cittamani ರೆಸ್ಟೋರೆಂಟ್ ನ ಸಿಗ್ನೆಚರ್ ಡಿಶ್ ಗಳು ಭೋಜನದ ಪ್ರಮುಖ ಹೈಲೈಟ್ ಆಗಿದ್ದವು. ಪೊರ್ಸಿನಿ ಮಶ್ರೂಮ್ಸ್ ವ್ರಾಪ್ಡ್ ಇನ್ ಬಿಕನೇರಿ ರೋಟಿ, ಸ್ಟಫ್ಡ್ ರ್ಯಾವಿಯೋಲಿ, ಪನೀರ್ ಕುರ್ಚನ್ ಹೀಗೆ ವಿಶಿಷ್ಟ ತಿನಿಸುಗಳನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ.

ಇಟಾಲಿಯನ್ ತಿನಿಸುಗಳ ಜೊತೆಗೆ ಇಂಡಿಯನ್ ಫ್ಯೂಶನ್, ದಕ್ಷಿಣ ಭಾರತದ ಖಾದ್ಯಗಳು, ರಬ್ಡಿಯಂತಹ ದೇಸಿ ಸಿಹಿ ತಿನಿಸುಗಳು ಕೂಡ ಇದ್ವು. ಡಿಸೆಂಬರ್ 21ರಂದು ದೆಹಲಿಯ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನಲ್ಲಿ ವೈಭವದ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದೆ. ನಂತರ ಮುಂಬೈನಲ್ಲೂ ಗ್ರಾಂಡ್ ಪಾರ್ಟಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...